2178

ಉಡುಪಿ: ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಆವರ್ಸೆ ಸಮೀಪ ನಡೆದಿದೆ.

ಮೃತರನ್ನು ಸೀತಾನದಿಯ ಆನೆಗುಂಡಿಯಲ್ಲಿ ಕಿರಣ್ ಪೂಜಾರಿ ಹಾಗೂ ವಿಕ್ರಂ ಪೂಜಾರಿ ಎಂದು ಗುರುತಿಸಲಾಗಿದೆ.

ಕಿರಣ್ ಪೂಜಾರಿ ಮತ್ತು ವಿಕ್ರಂ ಆವರ್ಸೆ ಹೊಳೆಗೆ ಕೈ ಕಾಲು ತೊಳೆದುಕೊಂಡು ಬರುತ್ತೇವೆ ಎಂದು ಹೋಗಿದ್ದರು. ಆದರೆ ಹೋದವರು ತುಂಬಾ ಹೊತ್ತಾದರು ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ.ಈ ವೇಳೆ ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By Suddi9

Leave a Reply

Your email address will not be published. Required fields are marked *