ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿರುವ ಶ್ರೀ ರಾಮುಲು ಅವರು ಕಣ್ಣಿರಿಟ್ಟುವ ಘಟನೆ ವರದಿಯಾಗಿದೆ.
ಮತ ಎಣಿಕೆ ಘೋಷಣೆಯಾದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ನೈತಿಕವಾಗಿ ಗೆಲುವು ನನ್ನದೆ ಆಗಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯರ ಗೆಲುವು ಅಲ್ಲ ಎಂದು ಕಣ್ಣೀರಿಟ್ಟ ಅವರು, ನನ್ನ ಸೋಲಿಗೆ ಜೆಡಿಎಸ್ ಹೆಚ್ಚು ಮತ ತಗೆದುಕೊಂಡಿದ್ದೆ ಕಾರಣ. ಜೆಡಿಎಸ್ ಅಭ್ಯರ್ಥಿ ಬಾದಾಮಿ ಯಲ್ಲಿ ಇಷ್ಟೊಂದು ಮತ ಪಡೆಯುತ್ತಾರೆ ಎಂದು ನಾನು ಊಹಿಸಿರಲಿಲ್ಲ ಎಂದಿದ್ದಾರೆ.
ಬಾದಾಮಿಯಿಂದ ನಾನು ಗೆಲ್ಲಬೇಕೆನ್ನುವ ಆಸೆಯಿತ್ತು, ಸೋತಿರೋದಕ್ಕೆ ಭಾವುಕನಾದೆ ನಾನು ಬಾದಾಮಿಯಲ್ಲಿ ಸೋಲನ್ನು ಕಂಡರೂ ಆಗಾಗ ಬಾದಾಮಿಗೆ ಬಂದು ಹೋಗುವೆ ಎಂದು ಹೇಳಿದ್ದಾರೆ.

