26vpEthamogaru

ಕೈಕಂಬ: ಇಲ್ಲಿನ ಕಂದಾವರ ಗ್ರಾಮದಿಂದ ಅದ್ಯಪಾಡಿ ಸಂಪರ್ಕಿಸುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಪ್ರಕೃತಿ ರಮಣೀಯ ಕೃಷಿ ಪ್ರದೇಶದಲ್ಲಿ ತಲೆ ಎತ್ತಿರುವ ಬೈಲು ಮೂಡುಕರೆ ಕುಟುಂಬದ ಏತಮೊಗರು ದೊಡ್ಡಮನೆ ಹಲವು ವಿಶಿಷ್ಠತೆಯಿಂದ ರೂಪುಗೊಂಡು ನಿಂತಿದೆ.

ಏತಮೊಗರು ದೊಡ್ಡಮನೆ ಎರಡಂತಸ್ತಿನಾಗಿದ್ದು, ವಾಸ್ತು ತಜ್ಞ ಕುಲಶೇಖರ ರಾಜಕುಮಾರರ ಸಲಹೆಯಂತೆ ನಿರ್ಮಾಣಗೊಂಡಿದೆ. ವಾಮಂಜೂರಿನ ಸಿವಿಲ್ ಇಂಜಿನಿಯರ್ ಪುರುಷೋತ್ತಮ ಹಾಗೂ ಶ್ರೀ ದುರ್ಗ ಕನ್ಸ್ಟ್ರಕ್ಷನ್ ಮಾಲಕ ಮೂಡುಜಪ್ಪುಗುತ್ತು ಸತೀಶ್ ಶೆಟ್ಟಿ ದೊಡ್ಡಮನೆಯ ಅಂದ ಹೆಚ್ಚಿಸುವಲ್ಲಿ ನಿರಂತರ ಪರಿಶ್ರಮ ವಹಿಸಿದ್ದಾರೆ.

ಮೂಲದ ಹೆಸರಿಗೆ ತಕ್ಕಂತೆ ದೊಡ್ಡಮನೆಯಾಗಿ ರೂಪುಗೊಂಡಿರುವ `ದೊಡ್ಡಮನೆ’ಯಲ್ಲಿ ಎ.27ರಿಂದ ವಾಸ್ತು ಮೋಕ್ಷ ನ್ನಿತರ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಎ.28ರಂದು ಅದ್ದೂರಿಯಾಗಿ ಗೃಹ ಪ್ರವೇಶ ನಡೆಯಲಿದೆ. ಎ. 29ರಂದು ತುಳುನಾಡ ದೈವೀ ಪರಂಪರೆಯಂತೆ ಗೃಹ ಪ್ರವೇಶದ ನಿಮಿತ್ತ ಇಲ್ಲಿ ಕುಟುಂಬದ ದೈವಗಳಿಗೆ ಧರ್ಮನೇಮೋತ್ಸವ ಆಯೋಜಿಸಲಾಗಿದೆ.

ಈ ಎರಡೂ ಕಾರ್ಯಕ್ರಮಗಳು ಕುಟುಂಬದ ಮುಂಚೂಣಿಯಲ್ಲಿರುವ ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ, ಹಿರಿ ಸಹೋದರ ಅಶೋಕ್ ಶೆಟ್ಟಿ, ಐವರು ಸಹೋದರಿಯರು ಮತ್ತು ಕುಟುಂಬದ ಹಿರಿ-ಕಿರಿಯರ ಒಗ್ಗಟ್ಟಿನಿಂದ ಸಾಕಾರಗೊಳ್ಳುತ್ತಿದೆ. ಇಲ್ಲಿ ನೆಲೆಯೂರಿರುವ ಬಂಟ, ಜುಮಾದಿ ಹಾಗೂ ಸಹ-ಪರಿವಾರ ದೈವಗಳಿಗೆ ಧರ್ಮನೇಮ ಜರಗಲಿದೆ. ಹತ್ತಿರದ ಏತಮೊಗರು ಗುತ್ತಿನಲ್ಲಿ 2011ರಲ್ಲಿ ಇದೇ ದೈವಗಳಿಗೆ ಧರ್ಮನೇಮ ನಡೆದಿತ್ತು. ಇದು ಮಾಗಣೆ ದೈವವೂ ಆಗಿದೆ.

ಧರ್ಮನೇಮಕ್ಕಾಗಿ ಮನೆಯ ಹಿಂದುಗಡೆ ಹಾಗೂ ಎದುರಿನಲ್ಲಿ ಮತ್ತೊಂದು ವಿಶಾಲ ಚಪ್ಪರ ನಿರ್ಮಿಸಲಾಗಿದ್ದು,  ಕಾರ್ಯಕ್ರಮದಲ್ಲಿ 8ರಿಂದ 10 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆಂದು ಹರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ  ಭುಜಂಗ ಶೆಟ್ಟಿ ಜೆಪ್ಪುಗುಡ್ಡೆ ಗುತ್ತು, ಬಾಬು ಶೆಟ್ಟಿ, ವಿಠಲ ಪೂಂಜ, ಕರುಣಾಕರ ಶೆಟ್ಟಿ, ಅಮ್ಮುಂಜೆ, ಪ್ರಭಾತ ಶೆಟ್ಟಿ, ಶಾಂತಾರಾಮ ಶೆಟ್ಟಿ, ಮೂಡುಜೆಪ್ಪು, ಮನೋಹರ ಶೆಟ್ಟಿ, ಮಂದಬೆಟ್ಟು, ಮಧು ಶೆಟ್ಟಿ ನಂದಬೆಟ್ಟು, ಮುರಳಿ ಶೆಟ್ಟಿ ನಂದಬೆಟ್ಟು, ಸಚಿನ್ ಅಡಪ, ಯಶವಂತ ಕೋಟ್ಯಾನ್, ಸುಧೀರ್ ನಾಯ್ಕ್, ಜೆಪ್ಪುಗುಡ್ಡೆ ಗುತ್ತು, ಪ್ರಸಾದ್ ನಾಯ್ಕ್, ವಿರಾರ್ ಮುಂಬೈ, ರೋಹಿತ್ ಶೆಟ್ಟಿ, ಮಿಜಾರು, ವಿನೋದ್ ಮಾಡ ಕೈಕಂಬ, ದಯಾನಂದ ಶೆಟ್ಟಿ, ವಿರಾರ್ ಮುಂಬೈ, ವಿಶ್ವನಾಥ ಶೆಟ್ಟಿ, ವಿರಾರ್ ಮುಂಬೈ, ಜೈರಾಜ್ ಶೆಟ್ಟಿ, ವಿರಾರ್ ಮುಂಬೈ, ನವೀನ್ ಶೆಟ್ಟಿ, ವಿರಾರ್ ಮುಂಬೈ, ಸುಜೀರ್ ಶೆಟ್ಟಿ, ಇನ್ನದ ಗುತ್ತು, ದಿವಾಕರ ಶೆಟ್ಟಿ ಮಿಜಾರು, ನವೀನ್ ಕೈಕಂಬ, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಕಾರಮೊಗರು ಗುತ್ತು ಮನೋಹರ ಭಂಡಾರಿ  ಹಾಗೂ ಹರ್ಷಿತ ಕ್ಯಾಟರರ್ಸ್ ಕೈಕಂಬ ಮತ್ತು ಪಿಲಿಕುಲ ರೆಸ್ಟೋರೆಂಟ್,  ಸಿಬ್ಬಂದಿ ವರ್ಗ, ಹಾಗೂ ಏತಮೊಗರು ಗುತ್ತಿನ ಕುಟುಂಬಸ್ಥರು ಉಪಸ್ಥಿತರಿರುವರು.

“ಮನೆ ದೈವಗಳ ಕೃಪೆಯಿಂದ ದೊಡ್ಡಮನೆಗೆ ಹೊಸ ರೂಪು ಬಂದಿದೆ. ಹಣವಿದೆ ಎಂದು ಪಟ್ಟಣಕ್ಕೆ ಹೋಗುವ ಮನಸ್ಸು ಮಾಡದೆ, ಹಳ್ಳಿಯಲ್ಲಿದ್ದುಕೊಂಡೇ ಮನೆತನದ ಹೆಸರು ಉಳಿಸಲು ಪ್ರಯತ್ನಿಸಿದ್ದೇನೆ. ಇದೆಲ್ಲವೂ ದೈವಗಳು ನನ್ನಿಂದ ಮಾಡಿಸುತ್ತಿವೆ. ಒಟ್ಟಿನಲ್ಲಿ ಇದೊಂದು ಸಂತಸದ ಸಂಗತಿ.”

  -ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ

26vpHarish-shetty-200x300

ಫೋಟೊ ಕ್ಯಾಪ್ಶನ್:

26-1

1. ಏತಮೊಗರು ದೊಡ್ಡಮನೆಯ ಗೃಹಪ್ರವೇಶ ಹಾಗೂ ಧರ್ಮನೇಮದ ಬಗ್ಗೆ  ಹರೀಶ್ ಶೆಟ್ಟಿಯವರು ಮುಂಬೈ  ಹೊಟೇಲ್ ಉದ್ಯಮಿ  ವಿರಾರ್ ಶಂಕರ ಶೆಟ್ಟಿಯವರೊಂದಿಗೆ ಗುರುವಾರ ಮಾತುಕತೆ ನಡೆಸುತ್ತಿರುವುದು.

26-2

2. ಏತಮೊಗರು ಹರೀಶ್ ಶೆಟ್ಟಿ ಅವರು ತನ್ನ ಕುಟುಂಬಸ್ಥರೊಂದಿಗೆ ಸಂವಾದ ನಡೆಸುತ್ತಿರುವುದು.

 

ವರದಿ: ಓಮನಾಥ್ ಪೂಜಾರಿ

By Suddi9

Leave a Reply

Your email address will not be published. Required fields are marked *