ವಿವಾದಕ್ಕೆಡೆಮಾಡಿದ-ಅಕ್ರಮ-ಕಟ್ಟೆ-ತಹಶೀಲ್ದಾರ್-ರಿಂದ-ತೆರವು-

ಮೂಡಬಿದಿರೆ:  ಮಸೀದಿಯ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟೆಯನ್ನು ಸ್ಥಳೀಯ ಪೊಲೀಸರ ಸಹಾಯದಿಂದ ಮೂಡಬಿದಿರೆ ತಹಶಿಲ್ದಾರ್ ತೆರವು ಗೊಳಿಸಿದರು.

ಕೋಮು ಸಾಮರಸ್ಯ ಕದಡುವ ದೃಷ್ಟಿಯಿಂದ ದೈವದ ಹೆಸರು ಹೇಳಿಕೊಂಡು ಮಸೀದಿಯ ಮುಂಭಾಗದಲ್ಲೇ ಕಟ್ಟೆ ಕಟ್ಟಲಾಗಿದೆ ಎಂದು ಮಸೀದಿಯ ಆಡಳಿತ ಸಮಿತಿ ತಹಶಿಲ್ದಾರ್ ಗೆ ದೂರು ನೀಡಿತ್ತು.

ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ತಹಶಿಲ್ದಾರ್ ಅಕ್ರಮ ಕಟ್ಟೆಯನ್ನು ತೆರವು ಗೊಳಿಸಿದ್ದಾರೆ.

ಮಸೀದಿಯ ಪಕ್ಕದಲ್ಲಿ ಕೋಟೆಬಾಗಿಲು ಮಾಹಾಮ್ಮಯಿ ದೇವಸ್ಥಾನ ವಿದೆ. ಪ್ರತೀ ವರ್ಷ ಜಾತ್ರೆಯ ಸಂದರ್ಭ ಮಸೀದಿಯ ಅಣತಿ ದೂರದಲ್ಲಿ ಮಾರಿ ವಿಸರ್ಜನೆ ಮಾಡಲಾಗುತ್ತಿತ್ತು. ದೈವದ ಅಪ್ಪಣೆಯಂತೆ ಮಸೀದಿಯ ಮುಂಭಾಗದ ಮಾರಿ ವಿಸರ್ಜನಾ ಸ್ಥಳದಲ್ಲಿ ಕಟ್ಟೆ ಕಟ್ಟಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *