BTW_APL5_2

ಬಂಟ್ವಾಳ : ಜಗತ್ತು ಧರ್ಮದ ಅಡಿಪಾಯದ ಮೇಲೆ ನಿಂತಿದ್ದು, ಧರ್ಮ ಇಲ್ಲದ ಬದುಕು  ಅದು ಬದುಕೇ ಅಲ್ಲ, ಧರ್ಮ ಇಲ್ಲದ ರಾಷ್ಟ್ರ ಅದು ರಾಷ್ಟ್ರವೇ ಅಲ್ಲ.  ಸಕಲರ ಅಭ್ಯುದಯದ ವಿಚಾರವೇ ಧರ್ಮ ಆಗಿದೆ  ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಸಜೀಪಗುತ್ತು ಕುಟುಂಬಸ್ಥರ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ಧರ್ಮನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಬದಕಿನಲ್ಲಿ ನಿತ್ಯವೂ  ನಾವು ನಮ್ಮ ಮನಸ್ಸಿನಲ್ಲಿ ಧರ್ಮ ನೇಮವನ್ನು ಮಾಡಿಕೊಳ್ಳಬೇಕು. ಧರ್ಮ ಹಾಗೂ ಸತ್ಯದಿಂದ ಇರುಬೇಕು ಎನ್ನುವುದು ಇದರ ತಾತ್ಪರ್ಯ ಎಂದು ನುಡಿದರು.

ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ,  ಧರ್ಮದ ಬಗ್ಗೆ ಜಾಗೃತರಾಗಿರುವುದೇ ಧರ್ಮ ನೇಮ. ಮನುಷ್ಯ ಜಾಗೃತನಾಗಿದ್ದಾಗ ಆತನಿಗೆ ಕುಟುಂಬ, ಸಮಾಜದ ಬಗ್ಗೆ ಅರಿವು ಮೂಡುತ್ತದೆ ಎಂದವರು, ಶಾಸ್ತ್ರ ಹಾಗೂ ಜಾನಪದ ಬೇರೆ ಬೇರೆಯಾಗಿದ್ದರೂ  ಅದು ಸಾಮಾಜಿಕ ಭದ್ರತೆಯನ್ನು ನೀಡುವ ವ್ಯವಸ್ಥೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜಾ ಅಧ್ಯಕ್ಷತೆ ವಹಿಸಿದ್ದರು. ಧರ್ಮನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ಗಡಿಪ್ರಧಾನರಾದ ಕೋಚು ಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ,  ಅಧ್ಯಕ್ಷ ಕಾಡುಮಠ ಸದಾಶಿವ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಶೆಟ್ಟಿ ಬರ್ಕೆ,  ಕಾಂತಾಡಿಗುತ್ತು ಗಡಿ ಪ್ರಧಾನ ಉಗ್ಗಶೆಟ್ಟಿ ಯಾನೆ ಗಣೇಶ್ ನಾಯ್ಕ್ ,  ಬೀಜಂತ್ತಾಡಿ ಗುತ್ತು ಶಿವಾರಾಮ ಭಂಡಾರಿ, ಮಾಡಂತ್ತಾಡಿ ಗುತ್ತು ಯಶೋಧರ ರೈ, ನಗ್ರಿ ಗುತ್ತು ಜಯರಾಮ ಶೆಟ್ಟಿ, ಸಜೀಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ವೆಂಕಟೇಶ್ ಭಟ್ ಮುಳಿಂಜ, ಜೀಣೋದ್ಧಾರ ಸಮಿತಿ ಅಧ್ಯಕ್ಷ  ರಾಧಕೃಷ್ಣ ಆಳ್ವ,  ಬಂಟರದ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಗುತ್ತು, ಬಂಟರ ಸಂಘ ಸಜೀಪ ವಲಯದ ಅಧ್ಯಕ್ಷ  ಶ್ರೀಕಾಂತ ಶೆಟ್ಟಿ,  ಉದ್ಯಮಿ ರೋಹಿತ್ ಶೆಟ್ಟಿ ನಗ್ರಿ ಗುತ್ತು, ರವೀಂದ್ರ ಭಂಡಾರಿ, ವಾರಿ ಜಾಕ್ಷಿ ಮುಂಡಪ್ಪ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಪ್ರಕಾಶ್ ಮತ್ತಿತರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಜಪ್ಪಿನಮೊಗರು ಸ್ವಾಗತಿಸಿ,  ಶಿಕ್ಷಕ ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಗಂಗಾಧರ ಆಳ್ವ ಹಾಗೂ ವಸಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ಭಕ್ತಿ ಭಾವ ಸಂಗಮ ನಡೆಯಿತು.

By Suddi9

Leave a Reply

Your email address will not be published. Required fields are marked *