ಗುರುಪುರ-ಕೈಕಂಬ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭಾರತ್ ಮಾತಾ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಸಂಯುಕ್ತಾಶ್ರದಲ್ಲಿ ಇಲ್ಲಿನ ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಉಚಿತ ಆರೋಗ್ಯ ಶಿಬಿರವನ್ನು ಶಿಕ್ಷಕರ ಸಂಘದ ಅಧ್ಯಕ್ಷ ಅನಂತ ಕೃಷ್ಣ ಕಾಮತ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಮಾತಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ವಾಲ್ಟರ್ ಸ್ವೀಫನ್ ಮೆಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಯೋಜಕ ಡಾ.ಹೆರ್ಬರ್ಟ್, ಶಾಲಾ ಸಂಚಾಲಕಿ ಫ್ಲೋರೆನ್ಸ್ ಮೆಂಡೀಸ್, ಆಡಳಿತ ಮಂಡಳಿ ಪ್ರತಿನಿಧಿ ರಾಜೇಶ್ ಕೊಟ್ಟಾರಿ, ಪ್ರಾಂಶುಪಾಲ ಮಹೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರೇಮಲತಾ ಸ್ವಾಗತಿಸಿ, ವೀಣಾ ವಂದಿಸಿದರು. ಶಂಕರಿ ಕಾರ್ಯಕ್ರಮ ನಿರೂಪಿಸಿದರು.

