ಕೈಕಂಬ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪೊಳಲಿ ಘಟಕದ ವತಿಯಿಂದ ಮಾ.25ರಂದು “ದ್ವಿತೀಯ ವರ್ಧಂತಿ ಉತ್ಸವ” ಗುರುಪುರ-ಕೈಕಂಬದಲ್ಲಿ ಆಯೋಜಿಸಲಾಗಿದೆ.
ಅಂದು ಸಂಜೆ 5ರಿಂದ 7ರವರೆಗೆ ಭಾಗವತರಾದ ಪದ್ಯಾಣ ಗಣಪತಿ ಭಟ್, ಪಟ್ಲ ಸತೀಶ್ ಶೆಟ್ಟಿ, ಬಲಿಪ ಪ್ರಸಾದ್ ಭಟ್ ಹಾಗೂ ಗಿರೀಶ್ ರೈ ಕಕ್ಯಪದವು ನೇತೃತ್ವದಲ್ಲಿ “ಯಕ್ಷ-ಗಾನ-ವೈಭವ” ನಡೆಯಲಿದ್ದು, 7ರಿಂದ 8.30ರವರೆಗೆ ಸಭಾ ಕಾರ್ಯಕ್ರಮ-ಸಂಮಾನ-ಸಂಸ್ಮರಣೆ ನೆರವೇರಲಿದೆ.
ಬಳಿಕ 8.45ರಿಂದ 11.30ರವರೆಗೆ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
