ಧಾರವಾಡ: ಸಾಲ ಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದ ಪೇಟೆ ಓಣಿಯ ದರ್ಗಾದ ಬಳಿ ಗೇಟ್ ಗೆ ಗುರುವಾರ ನಡೆದಿದೆ.
ಅಲ್ಲಾಭಕ್ಷ ನದಾಫ್ (56) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ.
ನದಾಫ್ ಅವರು ವಿಜಯ ಬ್ಯಾಂಕ್ ನಲ್ಲಿ 1.50 ಲಕ್ಷ ಸಾಲ ಹಾಗೂ ಖಾಸಗಿ ವಲಯದಲ್ಲಿ ಕೈ ಸಾಲ ಮಾಡಿದ್ದು, ಇದರಿಂದ ಸಾಲಗಾರರ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮೊರಬ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

