ಬಂಟ್ವಾಳ: ಸಾಮಾಜಿಕ ಸಾಮರಸ್ಯಕ್ಕೆ ಕ್ರೀಡೆ ಅಮೂಲ್ಯವಾದುದು. ಸಾಮರಸ್ಯವೆಂಬುದು ವೇದಿಕೆಯಲ್ಲಿ ಮಾತನಾಡುವ ವಿಷಯ ಆಗಬಾರದು ಅದನ್ನು ಆಚಾರ ವಿಚಾರದಲ್ಲಿ ಮೈಗೂಡಿಸಬೇಕು , ಕ್ರೀಡೆಯಲ್ಲಿ ಎಲ್ಲಾ ಜಾತಿ ಧರ್ಮದವರು ಭಾಗವಹಿಸುತ್ತಾರೆ. ದೇ ಶ-ದೇ ಶಗಳ ನಡುವಿನ ಕ್ರೀಡಾಕೂಟ ಜಾಗತಿಕ ಶಾಂತಿಗಾಗಿ ಇರುತ್ತದೆ. ದೇವರು ನಮ್ಮನ್ನು ಯಾವ ಧರ್ಮ ಜಾತಿ ಭಾಷೆಯಲ್ಲಿ ಹುಟ್ಟಿಸಿದ್ದಾನೋ ಆ ಧರ್ಮದ ಚೌಕಟ್ಟಿನಲ್ಲಿ ಬದುಕುವುದು ಧರ್ಮವಾಗಿದೆ . ನಾವು ಮನುಷ್ಯ-ಮನುಷ್ಯರನ್ನು ಪ್ರೀತಿಸೋಣ ಮನುಷ್ಯನ ಆರೋಗ್ಯಕ್ಕೆ ಕ್ರೀಡೆ ಮಹತ್ವದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನುಡಿದರು.
ಅವರು ಬಿ.ಸಿ.ರೋಡ್ ಶಾಂತಿಯಂಗಡಿ ಅದ್ದೇಡಿ ಕ್ರೀಡಾಂಗಣದಲ್ಲಿ ಜರಗಿದ ಬೆಳ್ಳಿಪಾಡಿ ರಮಾನಾಥ ರೈ ಅಭಿಮಾನಿ ಬಳಗ ಮತ್ತು ಕಟ್ಟೆ ಫ್ರೆಂಡ್ಸ್ ಶಾಂತಿಯಂಗಡಿ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ಟ್ರೋಪಿ 2018 ಇದರ ಸಮಾರೋಪ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಮಹಮ್ಮದ್ ಆಲಿ , ಹಮೀದ್ ಕಣ್ಣೂರು , ನಾಸಿರ್ ಫರ್ಲಿಯಾ, ಹನೀಫ್ ಕೋಸ್ಟಲ್, ಮಹಮ್ಮದ್ ಹನೀಫ್ ರವರನ್ನು ಸಚಿವ ರಮಾನಾಥ ರೈ ಸನ್ಮಾನಿಸಿದರು.ಇದೇ ಸಂದರ್ಭದಲ್ಲಿ ಸಚಿವ ಬಿ.ರಮಾನಾಥ ರೈ ಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡಾ ಅಧ್ಯಕ್ಷ ಸದಾಶಿವ ಬಂಗೇರಾ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ, ವಿಜಯಾ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್, ಆರಾದನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಮಾಜಿ ಜಿ.ಪಂ.ಸದಸ್ಯ ಉಮರ್ ಫಾರೂಕ್, ಉದ್ಯಮಿಗಳಾದ ಸರ್ಫಾರ್ ನವಾಜ್ , ಅಶ್ರಫ್ ಎಸ್.ಎಂ., ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು.
ಪುರಸಭಾ ಸದಸ್ಯ ಮಹಮ್ಮದ್ ಶರೀಫ್ ಸ್ವಾಗತಿಸಿ ಅಕ್ಬರ್ ಆಲಿ ಕಾರ್ಯಕ್ರಮ ನಿರೂಪಿಸಿದರು.
