ಕೈಕಂಬ : ಮೂಳೂರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನದ(ಶ್ರೀ ವೈದ್ಯನಾಥ) ಜೀರ್ಣೋದ್ಧಾರ ನಿಮಿತ್ತ ಮಾ. 13ರಂದು ಸಂಜೆ 6ಕ್ಕೆ ಕ್ಷೇತ್ರ ತಂತ್ರಿ, ದೈವಜ್ಞರು, ಗುತ್ತುಗಳ ಯಜಮಾನರು, ಸೇವಾ ಮನೆತನದವರು ಮತ್ತು ಊರ ಹತ್ತುಸಮಸ್ತರ ಸಮಕ್ಷಮದಲ್ಲಿ ಪರಿಹಾರಾದಿ ಪೂಜೆ ವಿಧಿಯಂಗವಾಗಿ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಅಘೋರ ಹೋಮ, 6,000 ಲಲಿತ ಸಹಸ್ರನಾಮ ಜಪ ಜರುಗಲಿದೆ.

ದೈವದ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳುವ ಊರವರು ಜೀರ್ಣೋದ್ಧಾರ ಸಂಕಲ್ಪ ನಿಧಿಗೆ ಒಂದು ಹಿಡಿ ಕಾಣಿಕೆ(ಒಂದು ಹುಂಡಿ), ಒಂದು ಸೇರು ಅಕ್ಕಿ ಮತ್ತು ಒಂದು ತೆಂಗಿನಕಾಯಿ ಕಾಣಿಕೆಯಾಗಿ ಒಪ್ಪಿಸಬೇಕು. ಮಾ. 14ರಂದು ಬೆಳಿಗ್ಗೆ `ಸಂಕೋಚ’ ಮಾಡಿ ಗರ್ಭಗುಡಿಯಲ್ಲಿರುವ ದೈವದ ಮಂಚವನ್ನು ಭಂಡಾರ ಮನೆಯ ಚಾವಡಿಗೆ ಸ್ಥಳಾಂತರಿಸಲಾಗುವುದು ಎಂದು ಹೊಸದಾಗಿ ರೂಪುಗೊಂಡ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *