ಕೈಕಂಬ : ಗುರುಪುರ ಗ್ರಾ.ಪಂ. ವ್ಯಾಪ್ತಿಯ ಮೂಳೂರು ಹಾಗೂ ಅಡ್ಡೂರು ಗ್ರಾಮ ಸೇರಿ ಆಯ್ದ ಆರು ಕಡೆಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
5vplasike

ಈ ವೇಳೆ ವಾಮಂಜೂರು ಪಶು ವೈದ್ಯಾಧಿಕಾರಿ ಡಾ. ಶಿವಣ್ಣ ಮಾತನಾಡಿ,  ನಮ್ಮ ಇಲಾಖೆ ಗ್ರಾಪಂ ಸಹಯೋಗದಲ್ಲಿ ಬೇರೆಬೇರೆ ಕಡೆಗಳಲ್ಲಿ ಆಗಾಗ್ಗೆ ಇಂತಹ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.

ಅಡ್ಡೂರಿನ ತಾರಿಕರಿಯ ಶಾಲೆ ಬಳಿ, ಕಾಂಜಿಲಕೋಡಿ ಪೊನ್ನೆಲ, ಮೂಳೂರು ಗ್ರಾಪಂ ವಠಾರ, ವಿಕಾಸನಗರ ಕೈಕಂಬ, ಸರ್ಕಾರಿ ಪದವಿಪೂರ್ವ ಕಾಲೇಜು(ಗುರುಪುರ) ಮತ್ತು ಜಲ್ಲಿಗುಡ್ಡೆ ಕುಷ್ಠರೋಗ ನಿರ್ವಹಣಾ ಕೇಂದ್ರದ ಬಳಿ ಸಾಕುನಾಯಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಯು. ಪಿ. ಇಬ್ರಾಹೀಂ,  ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ. ಎಂ. ಉದಯ ಭಟ್, ಪಿಡಿಒ ಅಬೂಬಕ್ಕರ್, ಸದಸ್ಯರಾದ ದಾವೂದ್, ಗ್ಲಾಡಿಸ್ ಕ್ವಾಡ್ರಸ್ ಮೊದಲಾದವರು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *