ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಅಚಾರಿಚೋರ ನಿವಾಸಿಗಳು ಕುಡಿಯುವ ನೀರಿಗಾಗಿ ನಡೆಸಿದ ಪ್ರತಿಭಟನೆ ಸಂಧರ್ಭದಲ್ಲಿ ನೀಡಿದ ಭರವಸೆಯಂತೆ ನೀರು ಪೂರೈಸದ ಹಿನೈಲೆಯಲ್ಲಿ ಅಕ್ರೋಶ ಗೊಂಡ ನಾಗರಿಕರು ಪಂಚಾಯತ್ ಕಚೇರಿಗೆ ದಾವಿಸಿ ನೀರು ಬಿಡದೇ ಕಚೇರಿಯನ್ನು ಮುಚ್ಚಲು ಬಿಡುವುದಿಲ್ಲ ಎಂದು ರಾತ್ರಿ 9 ಗಂಟೆ ತನಕ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ. ಅಚಾರಿ ಚೋರಕ್ಕೆ ಸಮರ್ಪಕ ಕುಡಿಯುವ ನೀರಿನ ಸರಬರಾಜು ಮಾಡುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಗುರುವಾರ ಪಂಚಾಯತ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಸಂಧರ್ಭದಲ್ಲಿ ಟ್ಯಾಂಕರ್ ಮೂಲಕ ಶುಕ್ರವಾರ ನೀರು ಸರಬರಾಜು ಮಾಡುವುದಾಗಿ ಭರವಸೆ ದೊರೆತ ಹಿನೈಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಅದರೆ ಶುಕ್ರವಾರ ಬೆಳಿಗ್ಗೆ 10 ಗಂಟೆಯಾದರೂ ಟ್ಯಾಂಕರ್ ನೀರು ಬಂದಿರಲಿಲ್ಲ ಈ ವೇಳೆ ಅಚಾರಿ ಚೋರಕ್ಕೆ ಬಂದ ಪಂಪ್ ಅಪರೇಟರನ್ನು ನಾಗರಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

01ಇದರಿಂದ ಬೇಸರ ಗೊಂಡ ಪಂಪ್ ಅಪರೇಟರ್ ಪಂಪ್ ಹೌಸ್‍ನ ಬಿಗದ ಕೀಯನ್ನು ಅಲ್ಲೆ ಇದ್ದ ಗ್ರಾಮ ಪಂಚಾಯತ್ ಸದಸ್ಯ ಅಬೂಬಕ್ಕರ್ ಕಲ್ಲಾಡಿ ಯವರತ್ತ ಎಸೆದು ಅಲ್ಲಿಂದ ತರಳಿದ್ದರು, ಬೀಗದ ಕೀಯನ್ನು ಅಬೂಬಕ್ಕರ್ ಕಲ್ಲಾಡಿಯವರು ಪಂಚಾಯತ್‍ಗೆ ಕೊಡದೆ ತನ್ನಲ್ಲೇ ಇರಿಸಿಕೊಂಡಿದ್ದರು. ನಾಗರಿಕರು ನೀರಿಗಾಗಿ ಪದೇ ಪದೇ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸುತ್ತಿದ್ದು ಅಧ್ಯಕ್ಷರು ಬರುತ್ತದೆ ಬರುತ್ತದೆ ಎಂದು ಹೇಳುತ್ತಾ ಕೊನೆಗೆ ಮೊಬೈಲ್ ಸ್ವಿಚಪ್ ಮಾಡಿದ್ದರು ಎಂದು ಆರೋಪ ವ್ಯಕ್ತವಾಗಿದೆ.

02ಮದ್ಯಾಹ್ನದವರೆಗೂ ನೀರು ಬಾರದೇ ಇದ್ದಾಗ ಕೆಲವರು ಪಂಚಾಯತ್‍ಗೆ ಅಗಮಿಸಿ ವಿಚಾರಿಸಲು ಆರಂಭಿಸಿದ್ದರು, ಸಂಜೆಯಾಗುತ್ತಲೇ ಕೆಲಸಕ್ಕೆ ಹೋಗಿದ್ದವರು ಮನೆಗೆ ಮರಳಿ ಬಂದಾಗ ನೀರು ಬಾರದೇ ಇದ್ದುದ್ದನ್ನು ಕಂಡು ಕೆರಳಿ ಅಚರಿಚೋರ ಪ್ರದೇಶಗಳ ನಿವಾಸಿಗಳು ಪಂಚಾಯತ್ ಕಛೇರಿಗೆ ದಾವಿಸಿ ನೀರು ಬಾರದೇ ಕಛೇರಿ ಮುಚ್ಚದಂತೆ ತಡೆದು ಪ್ರತಿಭಟನೆ ಪ್ರಾರಂಭಿಸಿದರು, ಪೊಲೀಸರು ಬಂದು ಪ್ರತಿಭಟನಾ ಕಾರರನ್ನು ಮನವೊಲಿಸಲು ಪ್ರಯತ್ನಿಸಿ ವಿಫಲರಾದರು ಅಧ್ಯಕ್ಷರು ಮತ್ತು ಬೀಗದ ಕೀಯನ್ನು ತೆಗೆದುಕೊಂಡು ಹೋಗಿರುವ ಪಂಚಾಯತ್ ಸದಸ್ಯರು ಕೂಡಾ ಸ್ಥಳಕ್ಕೆ ಬರಬೇಕೆಂದು ಅಗ್ರಹಿಸಿದರು. ಕೊನೆಗೂ ಪಂಚಾಯತ್ ಅಧ್ಯಕ್ಷರು ಅಗಮಿಸಿ ಉಪಾಧ್ಯಕ್ಷರು ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಹಾಜರಿದ್ದ ಸದಸ್ಯರೊಂದಿಗೆ ಚರ್ಚಿಸಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಖಂಡಿತವಾಗಿಯೂ ಟ್ಯಾಂಕರ್‍ನಲ್ಲಿ ನೀರು ಸರಬರಾಜು ಮಾಡುವ ಭರವಸೆ ನೀಡಿದರು.ಭರವಸೆ ತಪ್ಪಿದರೆ ಮತ್ತೆ ಪ್ರತಿಭಬಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅಧ್ಯಕ್ಷರು ಮೊಬೈಲ್ ಸ್ವಿಚ್ ಅಪ್ ಮಾಡಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.ಡಿ.ವೈ.ಎಫ್.ಐ ಜಿಲ್ಲಾ ಮುಖಂಡ ವಸಂತ ಆಚಾರಿ ಸಹಿತ ಪ್ರಮುಕರು ಈ ಸಂಧರ್ಭದಲ್ಲಿ ಹಾಜರಿದ್ದರು. ಕುಡಿಯುವ ನೀರಿನ ವಿಚಾರದಲ್ಲಿ ಕೆಲವು ಪಂಚಾಯತ್ ಸದಸ್ಯರು ರಾಜಕೀಯ ಮಾಡುತ್ತಿದ್ದು ಒಬ್ಬರ ವಿರುದ್ದ ಇನ್ನೊಬ್ಬರು ಜನರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕೆಲವು ನಾಗರಿಕ ಅಕ್ರೋಶ ವ್ಯಾಕ್ತ ಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *