naveen-kuthar

ಉಳ್ಳಾಲ: ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸಚಿವ ಯು.ಟಿ.ಖಾದರ್ ವಿರುದ್ಧ ಸಿಪಿಎಂ 25 ಹರೆಯದ ಯುವನಾಯಕನೋರ್ವನನ್ನು ಕಣಕ್ಕಿಳಿಸಿದೆ.

ಈ ಯುವಕ ಬೇರಾರು ಅಲ್ಲ. 2006 ರಲ್ಲಿ 8ನೇ ತರಗತಿಯಿಂದಲೇ ಎಸ್ಎಫ್ ಐ ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನಿತಿನ್ ಕುತ್ತಾರ್. ಎಲ್ ಎಲ್ ಬಿ ಪದವೀಧರರಾಗಿರುವ ನಿತಿನ್, ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ, ಸೌಜನ್ಯ ಕೊಲೆ ಪ್ರಕರಣ, ಕಾವ್ಯ ಪೂಜಾರಿ ಅಸಹಜ ಸಾವಿನ ಸೂಕ್ತ ತನಿಖೆಗೆ ಒತ್ತಾಯಿಸಿ ನಡೆದ ಹೋರಾಟದ ನೇತೃತ್ವ, ಉಳ್ಳಾಲದಲ್ಲಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿದಾಗ ಹೋರಾಟ, ಬಂಟ್ವಾಳ, ಬಜ್ಪೆ, ಮಂಗಳೂರಿನಲ್ಲಿರುವ ಹಾಸ್ಟೆಲ್ ಸೌಕರ್ಯಗಳಿಗಾಗಿ ವಿದ್ಯಾರ್ಥಿಗಳ ಪರ ಹೋರಾಟ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿ, ಪೋಷಕರನ್ನು ಸಂಘಟಿಸಿ ಹೋರಾಟ,  ಬಡ ಭೂ ರಹಿತರ ಪರವಾಗಿ ರೈತ ಸಂಘ ನಡೆಸಿದ ಭೂಮಿಗಾಗಿ ಹೋರಾಟದಲ್ಲಿ ಎರಡು ದಿನಗಳ ಜೈಲು ವಾಸ, ಉಳ್ಳಾಲದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಜಾಲದ ವಿರುದ್ಧ ಹೋರಾಟಗಳಲ್ಲಿ  ಮುಂಚೂಣಿಯಲ್ಲಿದ್ದರು.

ಮಂಗಳೂರಿನಲ್ಲಿ  ಸಿಪಿಎಂ ಗೆಲ್ಲಲು ಕಸರತ್ತು ನಡೆಸಿದ್ದು, ಅದಕ್ಕಾಗಿಯೇ ನಿತಿನ್ ಕುತ್ತಾರ್ ಅವರನ್ನು ಸ್ಪರ್ಧೆಗೆ ಇಳಿಸುವ ಮೂಲಕ ತೀವ್ರ ಪೈಪೋಟಿಯನ್ನು ಖಾದರ್ ಅವರ ಮುಂದಿಟ್ಟಿದೆ. ಇವೆಲ್ಲವನ್ನು ಮುಂದಿಟ್ಟುಕೊಂಡು ಪಕ್ಷದ ಸರ್ವಾನುಮತದಿಂದ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಅನ್ನುವುದು ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ. ಉಳ್ಳಾಲ ಭಾಗದಲ್ಲಿ ಯುವ ಮತದಾರರು ಹಾಗೂ ವಿದ್ಯಾರ್ಥಿ ಮತದಾರರು ಅನೇಕರಿದ್ದು, ಬದಲಾವಣೆ ಬಯಸಿರುವ ಅವರು ಸಿಪಿಎಂ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸದಲ್ಲಿ ಸಿಪಿಎಂ ಹೆಜ್ಜೆಯೊಂದನ್ನು ಮುಂದಿಟ್ಟಿದೆ..

By Suddi9

Leave a Reply

Your email address will not be published. Required fields are marked *