Parliment

ಹೊಸದಿಲ್ಲಿ:  ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳು ಸೇರಿದಂತೆ ದೇಶದ ಒಟ್ಟು 59 ರಾಜ್ಯಸಭಾ  ಸ್ಥಾನಗಳಿಗೆ  ಮಾರ್ಚ್ 23 ರಂದು ಚುನಾವಣೆ ನಡೆಯಲಿದೆ.

ಮಾರ್ಚ್‌ 23ರಂದು ರಾಜ್ಯದ 4 ಸ್ಥಾನಗಳಿಗೆ ದಿನಾಂಕ ನಿಗದಿ ಪಡಿಸಿ ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನಿವೃತ್ತಿಯಾಗಲಿರುವವರ 58 ಸ್ಥಾನ ತುಂಬಲು ಈ ಚುನಾವಣೆ ನಡೆಯಲಿದೆ. ಅಲ್ಲದೆ ಕೇರಳದ ಒಂದು ಸ್ಥಾನಕ್ಕೆ ಉಪಚುನಾವಣೆಯೂ ನಡೆಯಲಿದೆ.
ಮಾ. 23ರಂದು 58 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸಚಿವರಾದ ಅರುಣ್‌ ಜೇಟ್ಲಿ, ರವಿ ಶಂಕರ್‌ ಪ್ರಸಾದ್‌, ಪ್ರಕಾಶ್‌ ಜಾವ್ಡೇಕರ್‌, ಜೆ.ಪಿ. ನಡ್ಡಾ, ತಾವರ್‌ಚಂದ್‌ ಗೆಹ್ಲೋಟ್‌ ಅವರ ಅವಧಿ ಎಪ್ರಿಲ್.2ರಂದೇ ಅಂತಿಮಗೊಳ್ಳಲಿದೆ.
ಇನ್ನು ಕಾಂಗ್ರೆ ಸ್‌ನಿಂದ ಆಂಧ್ರದ ಚಿರಂಜೀವಿ, ರೇಣುಕಾ ಚೌಧರಿ, ರಾಜೀವ್‌ ಶುಕ್ಲಾ, ಉತ್ತರ ಪ್ರದೇಶದಲ್ಲಿ ಎಸ್ಪಿಯ ನರೇಶ್‌ ಅಗರ್ವಾಲ್‌, ಜಯಾ ಬಚ್ಚನ್‌, ಬಿಎಸ್‌ಪಿಯ ಮಾಯಾವತಿ ಅವಧಿಯೂ ಅಂತ್ಯಗೊಳ್ಳಲಿದೆ. ನಾಮ ನಿರ್ದೇಶಿತ ಸದಸ್ಯರಾದ ಕ್ರಿಕೆಟಿಗ ತೆಂಡೂಲ್ಕರ್‌, ನಟಿ ರೇಖಾ, ಆರ್ಥಿಕ ತಜ್ಞ ಅನು ಆಗ ಅವರ ಅವಧಿಯೂ ಎ. 26ರಂದು ಅಂತ್ಯವಾಗಲಿದೆ.

By Suddi9

Leave a Reply

Your email address will not be published. Required fields are marked *