ಬೆಂಗಳೂರು: ಗ್ಯಾಸ್ ಗೋಧಾಮಿನಲ್ಲಿ ಸಿಲಿಂಡರೊಂದು ಸ್ಫೋಟಗೊಂಡ ಪರಿಣಾಮ ಇಡೀ ಗೋಧಾಮು ಬೆಂಕಿಗಾಹುತಿಯಾದ ಘಟನೆ ನಗರ ಶಿವಾಜಿನಗರದಲ್ಲಿ ಶುಕ್ರವಾರ ನಡೆದಿದೆ.
ಗ್ಯಾಸ್ ಗೋಧಾಮಿನಲ್ಲಿ ಬಹುತೇಕ ಖಾಲಿ ಸಿಲಿಂಡರ್ಗಳೇ ಇದ್ದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದ್ದು, ಗ್ಯಾಸ್ ಗೊಧಾಮಿಗೆ ಬೆಂಕಿ ಹತ್ತಿದೆ ಎಂದು ತಿಳಿದು ಸ್ಥಳಿರಯರು ದೂರ ಓಡಿದ್ದರಿಂದ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಬಳಿಕ ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


