+65213

ಕೈಕಂಬ: ಫ್ರೆಂಡ್ಸ್ ಸರ್ಕಲ್ ಗುರುಪುರ-ಕೈಕಂಬ ವತಿಯಿಂದ ಬಡ ಹೆಣ್ಣು ಮಕ್ಕಳ ಮದುವೆ ಸಹಾಯಾರ್ಥನೆಗೆ ಫೆ.21ರಂದು “ಏಕ ದಿವಸದ ಧಾರ್ಮಿಕ ಮತಪ್ರವಚನ” ಕಾರ್ಯಕ್ರಮ ಇಲ್ಲಿನ ಪೊಳಲಿ ದ್ವಾರದ ಬಾಲ್ಮೀ ಶಾಲೆಯ ಎದುರಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಅಂದು ಸಂಜೆ 7ಕ್ಕೆ ನಡೆಯಲಿರುವ ಮತಪ್ರವಚನದಲ್ಲಿ ಭಾಗವಹಿಸುವ ಅಂತಾರಾಷ್ಟ್ರೀಯ ವಾಗ್ಮಿ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಈ ವೇಳೆ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಏರ್ಪಡಿಸಲಾಗಿದ್ದು, ಸ್ಥಳೀಯ ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಫ್ರೆಂಡ್ಸ್ ಸರ್ಕಲ್ ಗುರುಪುರ-ಕೈಕಂಬ ಅಧ್ಯಕ್ಷ ಜಿ.ಎಂ.ಇಮ್ತಿಯಾಝ್ ಹಾಗೂ ಉಪಾಧ್ಯಕ್ಷ ಇಮ್ತಿಯಾಝ್ ನಾಸ್ ನಾಸ್ ಪ್ರಕಟನೆಯಲ್ಲಿ ಕೋರಿದ್ದಾರೆ.

121231

 

By Suddi9

Leave a Reply

Your email address will not be published. Required fields are marked *