ಕೈಕಂಬ :ಇತಿಹಾಸ ಪ್ರಸಿದ್ಧ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 18ರಿಂದ ಫೆ. 25ರವರೆಗೆ ನಡೆಯಲಿದ್ದು. ಇದರ ಅಂಗವಾಗಿ ನಾನಾ ಕೇಂದ್ರಗಳಿಂದ ಫೆ.18 ರಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಆಪ್ರಯುಕ್ತ ಕೈಕಂಬದಲ್ಲಿ ಶುಕ್ರವಾರ ಹೊರೆಕಾಣಿಕೆ ಕಚೇರಿಯನ್ನು ತೆರೆಯಲಾಯಿತು.16vpkaikamba

ಮಂಜುಶ್ರೀ ಕಾಂಪ್ಲೆಕ್ಸ್ ಮಾಲಕರಾದ ಹರಿ ರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಕೆ.ಕೃಷ್ಣರಾಜ ತಂತ್ರಿ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ  ರಾಜ್ಯ ಕಾರ್ಯ  ಸತ್ಯಜಿತ್ ಸುರತ್ಕಲ್, ವಿನೋದ್ ಮಾಡ ಕೈಕಂಬ, ರಾಜೀವ ದರ್ಕೈಶಿಕಂಬ, ಶ್ರೀಧರ ರಾವ್ ಕೈಕಂಬ, ಹರೀಶ್ ಮಟ್ಟಿ, ಸುದರ್ಶನ ಕಂದಾವರ, ಬ್ರಹ್ಮಕಲಶೋತ್ಸವ ಸಮಿತಿಯ ಸಂಘಟನಕಾರ್ಯದರ್ಶಿ  ಗಳಾದ ಪುಷ್ಪರಾಜ ಪೂಜಾರಿ ಮತ್ತಿತರರು ಇದ್ದರು.

ಕೈಕಂಬ, ಕಂದಾವರ, ಮಳಲಿ, ಕಾಜಿಲ , ಮಟ್ಟಿ, ಕಿನ್ನಿಅರ್ಭಿ , ಕಿನ್ನಿಕಂಬಳ ಮಂತಾದಕಡೆಗಳಿಂದ ಹೊರೆಕಾಣಿಕಗಳನ್ನು ಕೈಕಂಬದ ಗಣೇಶ್ ಕಟ್ಟೆಯ ಬೆನಕಧಾಮದ ಕಛೇರಿಯಲ್ಲಿ ದಾಸ್ತಾನು ಮಾಡಬಹುದು ಎಂದು ಈ ಸಂದರ್ಭದಲ್ಲಿ ಹೇಳಿದರು

By Suddi9

Leave a Reply

Your email address will not be published. Required fields are marked *