746845

ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಮಗನೋರ್ವ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ದಾರುಣ ಘಟನೆ ನಗರದ ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಸೋವಾರ ತಡರಾತ್ರಿ ನಡೆದಿದೆ.

ಕುಡುಕ ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ.

ಕುಡುಕ ಸಂತೋಷ್ ತನ್ನ ತಾಯಿ ಮುನಿಯಮ್ಮ ಅವರನ್ನು ಹಣಕ್ಕಾಗಿ ಪೀಡಿಸುತ್ತಿದ್ದು, ಇದಕ್ಕಾಗಿ ವಿನಾ ಕಾರಣ ಜಗಳ ತೆಗೆಯುತ್ತಿದ್ದ. ಇದೇ ರೀತಿ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ  ಬಂದ ಸಂತೋಷ್, ಏಕಾಏಕಿ ತನ್ನ ತಾಯಿ ಮೇಲೆ ಹಲ್ಲೆ ನಡೆಸಿ ಬಳಿಕ ಮರದ ತುಂಡುನಿಂದ ಗಂಭೀರವಾಗಿ ಗಾಯಗೊಳಿಸಿದ್ದು, ಪರಿಣಾಮ ತಾಯಿ ಮುನಿಯಮ್ಮ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

By Suddi9

Leave a Reply

Your email address will not be published. Required fields are marked *