3451

ಕೈಕಂಬ: ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಗಂಜಿಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಂದಾರರ ಶಾಖೆ ಹಾಗೂ ಶಿಫಾ ಕ್ಲಿನಿಕಲ್ ಲ್ಯಾಬೋರೇಟರಿ ಕೈಕಂಬ ಸಂಯುಕ್ತಾಶ್ರಯದಲ್ಲಿ ಮಧುಮೇಹ ªಮುಕ್ತ ಭಾರತ ಜನಗಾಗೃತಿ ಅಂಗವಾಗಿ ಜ.9ರಂದು “ಉಚಿತ ಮಧುಮೇಹ ತಪಾಸಣಾ ಮತ್ತು ಮಾಹಿತಿ ಶಿಬಿರ” ಇಲ್ಲಿನ ಶ್ರೀ ರಾಮ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10;30ಕ್ಕೆ ನಡೆಯಲಿರುವ ಸಾಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಎ.ಜೆ.ಡೆಂಟಲ್ ಮುಖ್ಯಸ್ಥ ವೈ.ಭರತ್ ಶೆಟ್ಟಿ ನೆರವೇರಿಸಲಿದ್ದು, ಹರಿರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಂದಾರರ ಶಾಖೆ ಅಧ್ಯಕ್ಷ ಸತೀಶ್ ಶೆಟ್ಟಿ ಕಂದಾವರ ಭಾಗವಹಿಸಲಿದ್ದಾರೆ.

ಬಳಿಕ 11ರಿಂದ 12ರವರೆಗೆ  ಮಧುಮೇಹ ಕುರಿತು ವೈದ್ಯರೊಂದಿಗೆ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

 

By Suddi9

Leave a Reply

Your email address will not be published. Required fields are marked *