ಬಂಟ್ವಾಳ: ದಕ್ಷ ಯುವ ಬಳಗ (ರಿ) ಗ್ರಾಮ ಚಾವಡಿ ಕೋಟಿಪದವು ಇದರ 9 ನೇಯ ವಾರ್ಷಿಕೋತ್ಸವ ಭಾನುವಾರ ಶ್ರಿ ರಾಮ ಭಜನಾ ಮಂದಿರ ಕೋಟಿಪದವು ಇಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಶ್ರೀ ರಾಮ ಭಜನಾ ಮಂದಿರದ ವತಿಯಿಂದ ಸತ್ಯನಾರಾಯಣ ಪೂಜೆ ನೆರವೇರಿತು.
ದಕ್ಷ ಯುವ ಬಳಗ ವಾರ್ಷಿಕೋತ್ಸವ ಅಂಗವಾಗಿ ಧಾರ್ಮಿಕ ಸಭೆಯು ಪ್ರದೀಪ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಮಿತಾ ಶ್ಯಾಮ್ ಕಾರ್ಯದರ್ಶಿ ಬಿಜೆಪಿ ದಕ್ಷಿಣಕನ್ನಡ ಇವರು ದೀಪ ಪ್ರಜ್ವಲಿಸುವುದರೊಂದಿಗೆ ಚಾಲನೆ ನೀಡಿದರು. ಹಾಗೂ ಧಾರ್ಮಿಕ ಉಪನ್ಯಾಸಕ ಉಮಾನಾಥ ಕೋಟ್ಯಾನ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೀಡಿದರು. ಮುಖ್ಯ ಅತಿಥಿಗಳಾಗಿ ಸುಂದರ ಗಟ್ಟಿ ಅಂಬಾವನ ತೊಕ್ಕೊಟ್ಟು, ಮಹಾಬಲ ಹೆಗ್ಡೆ ಹರೇಕಳ, ಅಜಿತ್ ಪೂಜಾರಿ ಪಜೀರು ಭಾಗವಹಿಸಿದ್ದರು.
ಪ್ರದೀಪ್ ಗಟ್ಟಿ ಕಂಬಳಪದವು ಇವರಿಗೆ ಗ್ರಾಮ ಗೌರವ ಸಲ್ಲಿಸಲಾಯಿತು. ಸಂಘದ ಗೌರವ ಅಧ್ಯಕ್ಷರಾದ ಜಗದೀಶ್ ಭಂಡಾರಿ, ಶ್ರೀ ರಾಮ ಮಂದಿರ ಅಧ್ಯಕ್ಷರಾದ ವಿಶ್ವನಾಥ ಗಟ್ಟಿ, ಸಂಘದ ಅಧ್ಯಕ್ಷರಾದ ನವೀನ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಾರಾಯಣ ಟೈಲರ್ ಸ್ವಾಗತಿಸಿದರು, ಪುರುಷೋತ್ತಮ ಗಟ್ಟಿ ಕೋಟಿಪದವು ವರದಿ ವಾಚಿಸಿದರು, ಕೃಷ್ಣಪ್ರಸಾದ್ ಪಜೀರು ಅತಿಥಿಗಳಿಗೆ ವಂದಿಸಿದರು ಹಾಗೂ ಡಾ। ನವೀನ್ ಎನ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.

