ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ 34ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಕ್ಲಬ್ ಸ್ಥಾಪಕ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ಮತ್ತು ಮುಂಬಯಿ ಉದ್ಯಮಿ ಸುಂದರ ರಾಜ್ ಹೆಗ್ಡೆ ಸಾರಥ್ಯದಲ್ಲಿ ಮುಕ್ತ ಮತ್ತು 60 ಕೆ.ಜಿ. ವಿಭಾಗದ ರಾಣಿ ಅಬ್ಬಕ್ಕ  ಕಬಡ್ಡಿ ಪಂದ್ಯಾಟ ನ.18 ಮತ್ತು ನ.19ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷ, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಸ್ವಸ್ತಿಕ್ ಫ್ರೆಂಡ್ಸ್‍ನ ಕಚೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ 50 ಸಾವಿರ ರೂ. ಹಾಗೂ ಪ್ರಶಸ್ತಿ, ದ್ವಿತೀಯ 30 ಸಾವಿರ ರೂ., ತೃತೀಯ 20 ಸಾವಿರ ರೂ., ಚತುರ್ಥ 10 ಸಾವಿರ ರೂ. ಹಾಗೂ ಟ್ರೋಫಿಯನ್ನೊಳಗೊಂಡಿದೆ. ಕೆ.ಜಿ. ವಿಭಾಗದಲ್ಲಿ ಪ್ರಥಮ 30 ಸಾವಿರ ರೂ.ಮತ್ತು ಪ್ರಶಸ್ತಿ, ದ್ವಿತೀಯ 20 ಸಾವಿರ ರೂ., ತೃತೀಯ 10 ಸಾವಿರ ರೂ., ಚತುರ್ಥ 7 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುವುದು ಎಂದರು.ವಿಶೇಷ ಆಕರ್ಷಣೆಯಾಗಿ ಮಹಿಳಾ ತಂಡಗಳು ಮತ್ತು ಜಿಲ್ಲೆಯ ಪ್ರೌಢಶಾಲಾ ವಿಭಾಗದ 8 ತಂಡಗಳ ಜೂನಿಯರ್  ಕಬಡ್ಡಿ ಪಂದ್ಯಾಟ ನಡೆಯಲಿದೆ.

12bhswastik
ನ.10 ರಂದು ತಂಡದ ಹೆಸರು ನೊಂದಾವಣೆಗೆ ಕೊನೆಯ ದಿನವಾಗಿದ್ದು, ನ.11 ರಂದು ಮುಖಾಮುಖಿ ಚೀಟಿ ಎತ್ತಲಾಗುವುದು. ಕೆ.ಜಿ. ವಿಭಾಗದಲ್ಲಿ 35 ತಂಡಗಳು ಮತ್ತು ಮುಕ್ತ ವಿಭಾಗದಲ್ಲಿ 16 ತಂಡಗಳಿಗೆ ಮಾತ್ರ ಅವಕಾಶವಿದೆ ಎಂದರು.
ಪ್ರಥಮ ಬಾರಿಗೆ ಮುಕ್ತ ಪೆÇ್ರ ಕಬಡ್ಡಿ ನಡೆಯುತ್ತಿದ್ದು, ರಾಷ್ಟ್ರೀಯ ಮಟ್ಟದ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಹೇಳಿದರು.ಈ ಸಂದರ್ಭದಲ್ಲಿ ಪಂದ್ಯಾಟದ ಮಾಹಿತಿ ಕರಪತ್ರ(ಬ್ರೋಷರ್)ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ವಾಮದಪದವು ವ್ಯ.ಸೇ.ಸ. ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ತೀರ್ಪುಗಾರ ಫ್ರಾನ್ಸಿಸ್ ವಿ.ವಿ., ಪದಾಧಿಕಾರಿಗಳಾದ ರಾಜೇಶ್ ಪಿ., ರತ್ನಾಕರ ಪಿ.ಎಂ. ,ಜಯರಾಜ್ ಅತ್ತಾಜೆ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *