ಅಮ್ಮುಂಜೆ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹೊಳೆಬದಿ ದಿ. ಲಿಂಗಪ್ಪ ಪೂಜಾರಿವರ ಪುತ್ರ ಅಶೋಕ್ (40) ತನ್ನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಗುರುವಾರ ನಡೆದಿದೆ. ವಿಪರೀತ ಕುಡಿತದ ಚಟ ದಿಂದ ಮನನೊಂದು ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ ಬಂಟ್ವಾಳ ಪೋಲಿಸರು ಸ್ಥಳಕಾಗಮಿಸಿ ಮಹಜರು ನಡೆಸಿದ್ದಾರೆ. ಮೃತರು ಪತ್ನಿ ಮತ್ತು ಒರ್ವ ಪುತ್ರ ಪುತ್ರಿಯನ್ನು ಅಗಲಿದ್ದಾರೆ.
