ಗುರುಪುರ : ಇಲ್ಲಿನ ವಜ್ರದೇಹಿ ಮಠದಲ್ಲಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶಿರ್ವಾದದೊಂದಿಗೆ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯ್ತು.ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಶ್ರೀ ವಜ್ರದೇಹಿ ಮಠ ಆವರಣದಲ್ಲಿ ಹೊನಲು ಬೆಳಕನ ಆಟೋಟಗಳು ನಡೆದವು, ಪ್ರಶಾಂತ್ ಗುರುಪುರ ಹಾಗೂ ಸಚಿನ್ ಗುರುಪುರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ವಜ್ರದೇಹಿ ಬಳಗದ ಸದಸ್ಯರು ಹಾಗೂ ರಂಗ್‍ದ ಕಲಾವಿದೆರ್ ಸದಸ್ಯರ ನಡುವಿನ ಪಂದ್ಯಾಟಗಳು ಪ್ರೇಕ್ಷಕರನ್ನು ಹಿಚ್ಚೆದ್ದು ಕುಣಿಯುವಂತೆ ಮಾಡಿದ್ದರೆ , ಶ್ರೀ ಹನುಮ ಬಾಲ ಸಂರಕ್ಷಣಾ ಕೇಂದ್ರದ ವಿದ್ಯಾರ್ಥಿಗಳ ಆಟಗಳು ತೀವ್ರ ಪೈಪೋಡಿಯಿಂದ ಕೂಡಿದ್ದವು. 

ಬಾಲಕರ ಹಾಗೂ ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ ಲಿಂಬೆಚಮಚ ಓಟ, ಮಡಕೆ ಒಡೆಯುವ ಸ್ಪರ್ಧೆ ಉತ್ಸಾಹದಾಯಕವಾಗಿತ್ತು. ಸಮಾರೂಪ ಸಮಾರಂಭದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು , ಧರ್ಮಣ್ಣ ಪೂಜಾರಿ , ಪ್ರೇಮ್‍ನಾಥ್ ಭಜರಂಗದಳ ಇವರು ಬಹುಮಾನ ವಿತರಿಸಿದರು. ವಿಶ್ವನಾಥ್ ಪಂದ್ಯಾಟಗಳಿಗೆ ಕಾಮೆಂಟರಿ ನೀಡಿದರು, ಭರತ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.


