ಬಂಟ್ವಾಳ: ಔಷಧಿ ವನದಲ್ಲಿರುವ ದೇಯಿ ಬೈದಿತಿ ಮೂರ್ತಿಗೆ ಅಪಮಾನಗೈದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಹಾಗೂ ಇಂತಹ ಸಮಾಜ ಕಂಟಕರನ್ನು ಪೋಷಿಸುವ ಕೆಎಫ್‍ಡಿ ಹಾಗೂ ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಂಟ್ವಾಳ ಪ್ರಖಂಡ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಬುಧವಾರ ಬಂಟ್ವಾಳ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
ದೇಯಿ ಬೈದಿತಿ ಔಷಧಿ ವನದಲ್ಲಿ ಅನ್ಯಧರ್ಮಿಯನೊಬ್ಬ ತನ್ನ ವಿಕೃತ ಚೇಷ್ಟೆಯ ಮೂಲಕ ಸಮಸ್ತ ಹಿಂದೂ ಬಂಧುಗಳ ಸಹನೆಯನ್ನು ಸವಾಲಿಗೊಡ್ಡಿರುವುದು ಬೇಸರ ಉಂಟುಮಾಡಿದೆ. ಇಂತಹ ನೀಚ ಕೃತ್ಯಗೈದ ಮತಾಂದ ಹಾಗೂ ಆತನ ಸಹಚಚರರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೆ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಕೆಎಫ್‍ಡಿ ಹಾಗೂ ಎಸ್‍ಡಿಪಿಐ ಸಂಘಟನೆಗಳನ್ನು ಜಿಲ್ಲೆಯಲ್ಲಿ ನಿಷೇಧಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರಾದ ಅಶೋಕ್ ಶೆಟ್ಟಿ ಸರಪಾಡಿ, ಅರುಣ್ ಕುಮಾರ್ ನುಳಿಯಾಲುಗುತ್ತು, ಗುರುರಾಜ್ ಬಂಟ್ವಾಳ, ಅಭಿಷೇಕ್ ಸುವರ್ಣ, ದಕ್ಷಣ್, ಸೀತಾರಾಮ ಅಗೊಳಿಬೆಟ್ಟು, ಪ್ರಕಾಶ್ ಬೆಳ್ಳೂರು, ವಿನೋದ್ ಹಾಜರಿದ್ದರು.
