ಬಂಟ್ವಾಳ: ಸಜೀಪ ಮೂನ್ನೂರು ಗ್ರಾಮ ಪಂಚಾಯತ್ ಗ್ರಾಮ ಸಭೆ ಗ್ರಾ.ಪಂ.ಅಧ್ಯಕ್ಷ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್‍ನಲ್ಲಿ ನಡೆಯಿತು. ಕಳೆದ 25 ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಯಾಗಿರುವ ಹಿಂದೂ ರುದ್ರ ಭೂಮಿ ನಿರ್ಮಾಣಕ್ಕೆ ನ್ಯಾಯಲಯ ಅದೇಶ ನೀಡಿದ್ದರೂ ಕೂಡಾ ನಿರ್ಮಾಣಕ್ಕೆ ಮೀಣ ಮೇಷ ಮಾಡುವ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಕೇಳಿದಾದ ಉತ್ತರಿಸಿದ ಅಧ್ಯಕ್ಷರು ಮುಂದಿನ ಗ್ರಾಮಸಭೆಯ ಮೊದಲು ರುದ್ರ ಭೂಮಿ ನಿರ್ಮಾದ ಸಮಸ್ಯೆಯ ಬಗ್ಗೆ ಪರಿಹಾರ ಮಾಡುವ ಬಗ್ಗೆ ಭರವಸೆ ನೀಡಿದರು. ಗ್ರಾಮಸ್ಥರ ಬೇಡಿಕೆಯ ಹಿನ್ನಲೆಯಲ್ಲಿ ನಿರ್ಮಾಣವಾದ ಮಾರ್ನಬೈಲು ಆರೋಗ್ಯ ಕೇಂದ್ರದಲ್ಲಿ ಹಲವಾರು ವರ್ಷಗಳು ಸಂದರೂ ಸಾರ್ವಜನಿಕ ಅನುಕೂಲಕ್ಕೆ ಸೇವೆ ನೀಡದಿರುವದು ಯಾಕೆ ಎಂದು ಪ್ರಶ್ನಿಸಿದಾಗ ಇದನ್ನು ಇಲಾಖೆಯ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮ ಸಭೆಯನ್ನು ಸಮಯಕ್ಕೆ ಸರಿಯಾಗಿ ಆರಂಬಿಸಬೇಕು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಸಿವಂತೆ ಒತ್ತಾಯಿಸಿದರು. ನೊಡೆಲ್ ಅಧಿಕಾರಿಯಾಗಿ ಪಂಚಾಯತ್ ರಾಜ್ ವಿಭಾಗದ ಇಂಜಿನಿಯರ್ ನರೇಂದ್ರ ಬಾಬು ಆಭಗವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ಸದಸ್ಯೆ ನಸೀಮಾ ಬೇಗಂ ಹಾಗೂ ವಿವಿಧ ಅಧಿಕಾರಿಗಳು ಆಭಗವಹಿಸಿದ್ದರು. ಚರ್ಚೆಯಲ್ಲಿ ಎಂ ಸುಬ್ರಹ್ಮಣ್ಯ ಭಟ್, ಇಸ್ಮಾಯಿಲ್, ಪ್ರವೀಣ ಗಟ್ಟಿ, ಖಾದರ್, ಗಂಗಾದರ ನಾಯಕ್, ಮಹಮ್ಮದ್, ಸುರೇಶ್ ಗಟ್ಟಿ, ಶರೀಫ್ ಬಾಗವಹಿಸಿದ್ದರು.
