ಬಂಟ್ವಾಳ: ಸಾಲೆತ್ತೂರು ಸಮೀಪದ ಲಕ್ಷ್ಮೀಕೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ ಆಚರಣೆಯನ್ನು ಗುರುವಾರ ವಿಶಿಷ್ಟವಾಗಿ ಆಚರಿಸಲಾಯಿತು. ಸ್ಥಳೀಯ ರಿಕ್ಷಾ ಚಾಲಕ ಮೋನಪ್ಪ ಮಾದಿರ ಕುಣಿತವನ್ನು ಪ್ರದರ್ಶಿಸಿ ಶಾಲಾ ವಿದ್ಯಾರ್ಥಿಗಳಿಗೆ ತುಳು ನಾಡಿನ ಅಪರೂಪದ ಕುಣಿತವನ್ನು ಪರಿಚಯ ಮಾಡಿಕೊಟ್ಟು ಗಮನ ಸೆಳೆದರು. ಅಂದಾ ಪೆÇಣ್ಣೆ ನಿನ್ನ ಮೂಕುತಿ ಓಲು ದಕ್ ದ ಎನ್ನಾ.. ಎನ್ನತ್ತಾ ಹಾಡಿನೊಂದಿಗೆ ಹೆಜ್ಜೆ ಹಾಕಿದರು.
ಆಟಿ, ಸೋಣ ತಿಂಗಳಿನಲ್ಲಿ ತುಳುನಾಡಿನ ಮಹಿಳೆಯರು ತಡ್ಪೆ (ಸರಿಯಾದ ಕನ್ನಡ ಪದ ಬಳಸಿ) ಹಿಡಿದು ಅದರಲ್ಲಿರುವ ಮೂಗುತಿಯನ್ನು ಹುಡುಕುತ್ತಾ ಹಾಡುವ ಈ ನೃತ್ಯ ಪ್ರಾಕರ ವಿದ್ಯಾರ್ಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು. 
ಶಾಲೆಯ ಸ್ಥಳದಾನಿ, ತಾ.ಪಂ.ಮಾಜಿ ಸದಸ್ಯ ಸಾಲೆ ಮಹಮ್ಮದ್ , ಸ್ಥಳೀಯ ಗ್ರಾ. ಪಂ. ಉಪಾಧ್ಯಕ್ಷೆ ಯಮುನಾ ಗೌಡ, ಸದಸ್ಯ ಜಗದೀಶ್ ರೈ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಸಾರಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪೆಷಕರು ಮನೆಯಲ್ಲಿ ಸಿದ್ದಪಡಿಸಿ ತಂದ ಆಟಿ ತಿಂಗಳ ಆಹಾರಗಳನ್ನು ಪ್ರದರ್ಶಿಸಿದರು. ಮೆಂತೆ ಗಂಜಿ, ನುಗ್ಗೆ ಸೊಪ್ಪಿನ ಪಲ್ಯ, ಹಲಸಿನ ಗಟ್ಟಿ ಉಪ್ಪಡ್ ಪಚಿರ್, ಸಜಂಕ್ ಉಪ್ಪುಕರಿ, ಅಕ್ಕಿ ಉಂಡೆ, ಮತ್ತಿತರ ಖಾದ್ಯಗಳೊಂದಿಗೆ ಸಹ ಭೋಜನ ನಡೆಯಿತು. ರಂಗ ಕಲಾವಿದೆ ಸುನೀಲಾ ಜಾರಂದಗುಡ್ಡೆ ವಿದ್ಯಾರ್ಥಿಗಳಿಗೆ ನಾಟಕ, ಹಾಡು, ಆಟ ನಡೆಸಿಕೊಟ್ಟರು.
ಶಾಲಾ ಮುಖ್ಯೋಪಾಧ್ಯಾಯಿನಿ ಲವೀನಾ ಡಿಸೋಜಾ ಸ್ವಾಗತಿಸಿ ವಂದಿಸಿದರು. ಸಹ ಶಿಕ್ಷಕಿ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ಸಂಪನ್ಮೂಲ ವ್ಯಕ್ತಿ ಮೋನಪ್ಪ ಮಾದಿರ ಕುಣಿತ ಪ್ರದರ್ಶಿಸಿದರು.
ಆಟಿ ತಿಂಗಳ ಖಾದ್ಯವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
