ಬಂಟ್ವಾಳ: ಅಧ್ವಾನಗಳನ್ನು ಮೈಮೇಲೆ ಎಳೆದುಕೊಂಡೆ ಆರಂಭವಾದ ಬಿ.ಸಿ.ರೋಡಿನ ಮೇಲ್ಸ್ ತುವೆ,ಸರ್ವಿಸ್ ರಸ್ತೆಯಲ್ಲಿ ಗುರುವಾರ ಮತ್ತೊಂದು ಎಡವಟ್ಟಿನಿಂದ ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿ ಗುತ್ತಿಗೆದಾರನನ್ನು ತರಾಟಿಗೆ ತೆದುಕೊಂಡ ಘಟನೆ ನಡೆಯಿತು.
ಸರ್ವಿಸ್ ರಸ್ತೆಯ ಒಂದು ಬದಿಯಲ್ಲಿ ಕಾಂಕ್ರೇಟ್ ಚರಮನಡಿ ಕಾಮಗಾರಿ ನಡೆದಿದ್ದು ,ಮಿನಿವಿಧಾನಸೌಧದ ಕಡೆಗೆ ಕಡೆಗೆ ಹೋಗುವ ರಸ್ತೆ ಮುಕ್ಕಾಲುಭಾಗದವರೆಗೆ ಚರಂಡಿ ಕಾಮಗಾರಿಗಾಗಿ ಅಗೆದು ಹಾಕಲಾಗಿತ್ತು. ಈ ಕಾಂಕ್ರೇಟ್ ಚರಂಡಿ ರಸ್ತೆಗಿಂತ ಸುಮಾರು ಒಂದಡಿಯಷ್ಟು ಮೇಲಿದ್ದುದರಿಂದ ಪೂರ್ಣಗೊಂಡ ಕಡೆ ಮಣ್ಣು ಹಾಕಿ ಅದರ ಮೇಲೆ ಜಲ್ಲಿ ಹಾಕಲಾಗಿತ್ತು.ಇದು ಅವೈಜಾÐನಿಕ ರೀತಿಯಲ್ಲಿ ಯಾವುದೇ ವಾಹನ ಸಂಚರಿಸುವ ಸ್ಥಿತಿಯಲ್ಲಿರಲಿಲ್ಲ.
ಬೆಳಿಗ್ಗೆ ವಕೀಲರೊಬ್ಬರ ಕಾರೊಂದು ಹಿಂಎ,ಮುಂದಕ್ಕೆ ಚಲಿಸಲಾಗದೆ ಸಿಲುಕಿಗೊಂಡಿತ್ರು. ಆವಕೀಲರು ಪ್ರತಿಭಟನಾರ್ಥವಾಗಿ ಕಾರನ್ನು ಅಲ್ಲೇ ಬಿಟ್ಟು ತಮ್ಮ ಕರ್ತವ್ಯಕ್ಕೆ ತೆರಳಿದರು.ಇತ್ತ ಸಂಚಾರದಲ್ಲೂ ಅಡಚಣೆ ಉಂಟಾಯಿತು.ಸುದ್ದಿ ತಿಳಿದ ಟ್ರಾಫಿಕ್ ಠಾಣೆಯ ಎಎಸ್‍ಐ ಬಾಲಕ್ರಷ್ಣ ಮತ್ತವರ ಸಿಬ್ಬಂದಿಗಳು ಅಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರಾದರೂ ವಕೀಲರು ಮಾತ್ರ ತನ್ನ ಕಾರನ್ನು ಕದಲಿಸಲಿಲ್ಲ. ಹಾಗೆಯೇ ಮಾಹಿತಿ ತಿಳಿದ ಪುರಸಭಾ ಸದಸ್ಯರಾದ ಗೋವಿಂದ ಪ್ರಭು,ದೇವದಾಸ ಶೆಟ್ಟಿ,ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿ ಮೊದಲಾದವರು ಅಗಮಿಸಿ ರಾ.ಹೆ.ಪ್ರಾ.ಇಲಾಖಾಧಿಕಾರಿ ಹಾಗೂ ಗುತ್ವತಿಗೆದಾರನಿಗೆ ಪೆನಾಯಿಸಿ ತರಾಟೆಗೆ ತೆಗೆದು ಕೊಂಡರು. ಇದಾದ ಕೆಲಹೊತ್ತಿನಲ್ಲಿ ಗುತ್ತಿಗೆದಾರ ಸ್ಥಳಕ್ಕಾಗಮಿಸಿದರು.
ಹಲ್ಲೆಗೆ ಯತ್ನ ;
ಈ ಮಧ್ಯೆ ಕೈಕುಂಜೆ ರಸ್ತೆಯಲ್ಲಿರುವ ಸ್ಟೀಲ್ ಅಂಗಡಿಯ ಕಲವರು ದೌಡಾಯಿಸಿ ಚರಂಡಿ ಕಾಮಗಾರಿಯ ಕಾರ್ಮಿಕರ ಮೇಲೆ ಹಲ್ಲೆಗೂ ಯತ್ನಿಸಿದರು.ಆಗ ಸ್ಥಳದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪ್ರಭಾಕರ ದೈವಗುಡ್ಡೆ, ಕೆ.ಎಚ್.ಅಬುಬಕ್ಕರ್ ಮತ್ತಿತರರು ಇದನ್ನು ಅಕ್ಷೇಪಿಸಿ ತಡೆದರು. ರಸ್ತೆ ದುರಸ್ಥಿಗಾಗಿ ಪ್ರತಿಭಟನೆಗಳಾದಾಗ ಇತ್ತ ತಲೆ ಹಾಕದವರು ಇದೀಗ ತಮ್ಮ ಅಂಗಡಿಗೆ ಬರುವ ಲಾರಿಗಳಿಗೆ ಅಡಚಣೆ ಅಉತ್ತಿದೆ ಎಂದು ಕಾರ್ಮಿಕರ ಮೇಲೆ ಕೈ ಮಾಡಲು ಯತ್ನಿಸಿರುವುದನ್ನು ಖಂಡಿಸದರಲ್ಲದೆ ಅಧಿಕ ಭಾರ ಕಬ್ಬಿಣ ಹೇರಿಕೊಂಡು ಬರುವ ಲಾರಿಯಿಂದ ಚರಂಡಿ ಉಳಿದಿತೆ ಎಂದ ಅನುಮಾನವನ್ನು ಈ ಸಂದರ್ಭದಲ್ಲಿ ಇತರೆ ವಾಹನ ಚಾಲಕರು ವ್ಯಕ್ತಪಡಿಸಿದರು. ಬಳಿಕ ಅವೈಜಾÐನಿಕವಾಗಿ ಹಾಕಲಾದ ಉಬ್ಬುಗಳನ್ನು ಸರಿಪಡಿಸಿದರು. 
ಇನ್ನೂ ಬಾಕಿ; ಇನ್ನೊಂದು ಭಾಗದಲ್ಲಿ ಚರಂಡಿ ಕಾಮಗಾರಿ ಸ್ಥಗಿತಗೊಂಡು ತಿಂಗಳೆ ಉರುಳಿದೆ, ಮತ್ತೊಂದೆಡೆ ಸರ್ವಿಸ್ ರಸ್ತೆ ಕುಲಗೆಟ್ಟು ವಾಹನ ಸಂಚಾರ ಬಿಡಿ ಜನರು ಕೂಡ ನಡೆದುಕೊಂಡು ಹೋಗುವ ಸ್ಥಿತಿಯಲ್ಲಿಲ್ಲ, ಕಳೆದಮೂರುತಿಂಗಳಿನಿಂದಸಂಚಾರಕ್ಕೆ ಆಯೋಗ್ಯವಾಗಿರುವ ಈ ರಸ್ತೆ ಸರಿಪಡಿಸುವಂತೆ,ಮನವಿ ಸಲ್ಲಿಕೆ,ಪ್ರತಿಭಟನೆ,ಚಾಲಕರು ಭಿಕ್ಷ ಬೇಡಿ ತೇಪೆ ಹಾಕಿ ಪ್ರತಿಭಟಿಸಿದರೂ ರಾ.ಹೆ.ಪ್ರಾ.ಇಲಾಖೆ ಮಾತ್ರ ಜಪ್ಪಯ್ಯ ಅನ್ನಲಿಲ್ಲ ,ಪ್ರತಿದಿನ ಇದೇ ರಸ್ತೆಯನ್ನು ನೋಡಿಕೊಂಡು ಸಂಚರಿಸುವ ಘಟಾನುಘಟಿ ಜನಪ್ರತಿನಿಧಿಗಳ ಕೇವಲ ಆರೋಪ ,ಪ್ರತ್ಯಾರೋಪದಲ್ಲೇ ಕಾಲಹರಣ ಮಾಡುತ್ತಿದ್ದಾರೆ, ತೋರಿಕೆಗೆಂಬಂತೆ ಪುರಸಭೆ ಚರಂಡಿಗೆ ತೇಪೆ ಹಾಕಿದ್ದು,ಅದು ಅವರ ಹಿಂದೆಯೇ ಎದ್ದು ಹೋಗಿದೆ. ‘ಕೋಣನ ಕಿವಿಯಲ್ಲಿ ಕಿನ್ನರಿ ಊದಿದರೆ ಕನಿಷ್ಠ ಬಾಲವಾದರೂ ಅಲ್ಲಾಡಿಸುತ್ತೆ ಆದರೆ ದಪ್ಪ ಚರ್ಮದ ರಾ.ಹೆ.ಪ್ರಾ.ಇಲಾಖೆ,ಜಿಲ್ಲಾಡಳಿತ ಕಣ್ಣು,ಕಿವಿಯೇ ಇಲ್ಲದಂತೆ ವರ್ತಿಸುತ್ತಿದೆ’ ಎಂದು ಚಾಲಕ ಸಮುದಾಯ ಆಕ್ರೋಶ ವ್ಯಕ್ತ ಪಡಿಸಿದೆ.
ಬಿ.ಸಿ.ರೋಡು ಸರ್ವಿಸ್ ರಸ್ತೆ ಮತ್ತು ಪಡೀಲ್ ನಲ್ಲಿ ರಸ್ತೆ ಹದಗೆಟ್ಟು ಸಾರ್ವಜನಿಕರು ಹೈರಾಣವಾದರೂ ಸರಿ ಬ್ರಹ್ಮರಕೊಟ್ಲುವಿನಲ್ಲಿ ಟೋಲ್ ಸಂಗ್ರಹಕ್ಕೆ ಯಾವುದೇಅಡ್ಡಿಯಾಗಿಲ್ಲ.
