ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು ತುಂಬೆ ವಲಯದ ಬೆಂಜನಪದವು ಮತ್ತು ನೆತ್ತೆರಕೆರೆ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಅಮ್ಮುಂಜೆಗ್ರಾಮ ಪಂಚಾಯತ್‍ಅಧ್ಯಕ್ಷೆ ಪ್ರೇಮಲತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷ ಪಿ ಜನಾರ್ಧನ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.ಬೆಂಜನಪದವು ಸರಕಾರಿ ಪ್ರೌಢ ಶಾಲೆಯ ವೃತ್ತಿ ಶಿಕ್ಷಕ ದೇವದಾಸ್ ಮುಖ್ಯಅತಿಥಿಯಾಗಿ ಭಾಗವಹಿಸಿ ನಮ್ಮ ಪೂರ್ವಜ ಜೀವನ ಶೈಲಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಆಟಿದಆಚರಣೆ ಬಹಳ ಮಹತ್ವವನ್ನು ಪಡೆಯುತ್ತದೆ.ಜೊತೆಗೆ ಅಂದಿನ ಆಹಾರ ಪದ್ಧತಿಯನ್ನೂಯುವಜನತೆಗೆ ತಿಳಿದಂತಾಗುತ್ತದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕಿನಯೋಜನಾಧಿಕಾರಿ ಸುನೀತಾ ನಾಯಕ್, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ರೋನಾಲ್ಡ್‍ಡಿಸೋಜ, ನಾಟಿ ವೈದ್ಯ ಈಶ್ವರ ತಾಳಿಪ್ಪಾಡಿ, ಕೇಂದ್ರ ಒಕ್ಕೂಟದಅಧ್ಯಕ್ಷ ಸದಾನಂದಗೌಡ,ಅಮ್ಮುಂಜೆಗ್ರಾಮ ಪಂಚಾಯತ್‍ಉಪಾಧ್ಯಕ್ಷ ವಾಮನ ಆಚಾರ್ಯ, ಒಕ್ಕೂಟದ ಅಧ್ಯಕ್ಷ ಕೊರಗಪ್ಪ ಬೆಳ್ಚಾಡ ಉಪಸ್ಥಿತರಿದ್ದರು.
ಬೆಂಜನಪದವುಒಕ್ಕೂಟ ಕಾರ್ಯದರ್ಶಿ ಜಯ ಆಚಾರ್ಯ ಸ್ವಾಗತಿಸಿದರು. ಸೇವಾಪ್ರತಿನಿಧಿ ರತ್ನ ವಂದಿಸಿದರು.ತುಂಬೆ ವಲಯದ ಮೇಲ್ವಿಚಾರಕ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

