ಬೆಂಗಳೂರು: ರಾಜಕೀಯದಲ್ಲಿ ಯಾವುದೂ ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಹಾಗೇನಾದರೂ ಸಂಭವಿಸಿದ್ದಾದರೆ, ಅದನ್ನು ಆ ರೀತಿಯಲ್ಲಿಯೇ ಯೋಜಿಸಲಾಗಿದೆ ಎಂದು ನೀವು ಸವಾಲು ಮಾಡಬಹುದು-ಫ್ರಾಂಕ್ಲಿನ್ ಡಿ ರೋಸ್ವಲ್ಟ್ನ ಅವರ ಮಾತುಗಳು.
ಅಂಥಹದ್ದೊಂದು ಉತ್ತಮ ಹಾಗೂ ಮೊದಲ “ಯೋಜನೆ’ಯೊಂದು ನಮ್ಮ ಮುಂದೆ ತೆರೆದುಕೊಳ್ಳಲು ಸಿದ್ಧವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನದಾಳದ ಒಂದಷ್ಟು ಮಾತುಗಳನ್ನು ಆರ್.ಜೆ. ಶ್ರುತಿ ಅವರೊಂದಿಗೆ 92.7 ಬಿಗ್.ಎಫ್.ಎಮ್‍ನಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಶಿಕ್ಷಕರು ನನ್ನನ್ನು ಎಸ್3 (ಎಸ್ ಕ್ಯೂಬ್) ಎಂದು ಕರೆಯುತ್ತಿದ್ದರು. ನನ್ನ ತಂದೆಗೆ ನಾನು ಡಾಕ್ಟರ್ ಆಗಬೇಕು ಎಂಬ ಆಸೆ ಇತ್ತು. ನನ್ನ ತಂದೆಯ ಕನಸನ್ನು ಪೂರೈಸದೇ ದೂರ ಇರುವುದಕ್ಕೆ ಒಂದು ಕಾರಣವೂ ಇತ್ತು’ ಎಂದು ತಮ್ಮ ಶಾಲಾ ದಿನಗಳು, ವೃತ್ತಿ ಜೀವನದ ಕುರಿತು ಮಾತುಗಳನ್ನು ಹಂಚಿಕೊಂಡರು.
ಇದರ ಜತೆಗೆ ತಮ್ಮ ಶಿಸ್ತಿನ ಪರಿಪಾಲನೆ ಹಾಗೂ ಅಡುಗೆಯ ಕೌಶಲದ ಕುರಿತು ಒಂದಷ್ಟು ಮಾತನ್ನು ಹಂಚಿಕೊಂಡಿದ್ದಾರೆ. ‘ನಾನು ದಿನಾ 6.30ಕ್ಕೆ ಎದ್ದೇಳುತ್ತೇನೆ. ಇದಕ್ಕೆ ಕಾರಣ ನನ್ನ ಹೆಂಡತಿಯ ಮೊಬೈಲ್ ಆಗಲಿ ಅಥವಾ ಅಲಾರಾಂ ಆಗಲಿ ಅಲ್ಲ. ನನ್ನೊಳಗಿನ ಗಡಿಯಾರ ನನ್ನನ್ನು ಎಬ್ಬಿಸುತ್ತದೆ. ನನಗೆ ಅನ್ನ ಮಾಡುವುದಕ್ಕೆ ಹಾಗೂ ಉಪ್ಪಿಟ್ಟು ಮಾಡುವುದಕ್ಕೆ ಗೊತ್ತು’ ಎಂದು ತನ್ನ ಅಡುಗೆ ಕಲೆಯ ಕುರಿತು ಮಾತನಾಡಿದರು.
ಅವರ ಬಗ್ಗೆ ಯಾರಿಗೂ ಗೊತ್ತಿರದ ಐದು ವಿಷಯಗಳ ಕುರಿತು ಬಿಗ್‍ಎಫ್‍ಎಮ್‍ನಲ್ಲಿ ಹೇಳಿದ್ದಾರೆ. ಅವರ ಬಾಲ್ಯಕ್ಕೂ ಹಾಗೂ ಹಸಿವು ಮುಕ್ತ ಕರ್ನಾಟಕ ಎಂಬ ಯೋಜನೆಗೂ ಮತ್ತು ‘ಎಲ್ಲರಿಗೂ ಆಹಾರ’ ಎಂಬ ಪರಿಕಲ್ಪನೆಯನ್ನು ಮುಖ್ಯ ಗುರಿಯನ್ನಾಗಿಸಿ ಆರಿಸಿಕೊಂಡಿರುವುದಕ್ಕೆ ಇರುವ ಸಂಬಂಧದ ಕುರಿತು ಚರ್ಚಿಸಿದ್ದಾರೆ. ಜತೆಗೆ ತುಂಬ ಸಾಂದರ್ಭಿಕ ಧಿರಿಸಿನಲ್ಲಿ ಕಾಣಿಸಿಕೊಂಡ ಸಿಎಂ ಎಲ್ಲರ ಮುಖ್ಯ ಆಕರ್ಷಣೀಯವಾಗಿದ್ದರು.
ಇದು ಒಂದಿಷ್ಟು ಟ್ರೈಲರ್ ಅಷ್ಟೇ. ಯಾಕೆ ಅವರನ್ನು ಎಸ್ ಕ್ಯೂಬ್ ಎಂದು ಕರೆಯುತ್ತಿದ್ದರು, ಅವರ ನೆಚ್ಚಿನ ವಿಷಯ ವಿಜ್ಞಾನ, ಗಣಿತವಾಗಿದ್ದರೂ ಯಾಕೆ ಅವರು ವೈದ್ಯರಾಗಿಲ್ಲ ಎಂಬುದರ ಕುರಿತು ಸಂಪೂರ್ಣ ಚಿತ್ರಣವನ್ನು ಆರ್.ಜೆ ಶ್ರುತಿ 92.7 ಬಿಗ್ ಕಾಫಿಯಲ್ಲಿ ಇದೇ ಮಂಗಳವಾರ, ಬುಧವಾರ, ಗುರುವಾರ (ಜು. 25, 26, 27) ನೀಡಲಿದ್ದಾರೆ.

