ಬಂಟ್ವಾಳ : ಸುರಿಬೈಲು ದಾರುಲ್ ಅಶ್-ಅರಿಯ್ಯ ಆಂಗ್ಲ ಮಾಧ್ಯಮ ಶಾಲಾ ಚುನಾವಣೆ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿ ನಾಯಕರಾಗಿ ಮುಹಮ್ಮದ್ ರಾಫಿಹ್, ಉಪನಾಯಕರಾಗಿ ಮುಹಮ್ಮದ್ ಸಿಫಾನಾ, ಸಾಂಸ್ಕøತಿಕ ಸಚಿವರಾಗಿ ನಬೀಸತುಲ್ ಸಿಫಾನಾ, ಸ್ವಚ್ಛತಾ ಸಚಿವರಾಗಿ ಸಹ್‍ಲ ಅಫ್ಸೀನಾ ಹಾಗೂ ನಿಹ್‍ಮ ಫಾತಿಮಾ, ಕ್ರೀಡಾ ಸಚಿವರಾಗಿ ಬಾತಿಶ್ ಹಾಗೂ ಫಾಯಿಝ್, ಆರೋಗ್ಯ ಸಚಿವರಾಗಿ ಸಫ್ನಾಝ್, ಶಿಸ್ತು ಸಚಿವರಾಗಿ ಮುಹಮ್ಮದ್ ಮಸೂದ್ ಸಾಯಿಖ್ ಹಾಗೂ ಅರ್ಷೀನಾ, ವಿರೋಧ ಪಕ್ಷದ ನಾಯಕರಾಗಿ ಮುಹಮ್ಮದ್ ಸವಾದ್ ಹಾಗೂ ಆಫಿಯಾ ಅವರು ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕ ಎ.ಎಚ್. ನಾಸಿರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 
