ಮುತ್ತೂರು : ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಕೆ.ಎಂಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಹಾಗೂ ಮುತ್ತೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆದ ಶಿಬಿರವನ್ನು ಶ್ರೀ ವಿಲಿಯಂ ಸ್ಯಾಮುವೆಲ್ಸ್, ಕೆ.ಕೆ.ಎಸ್. ಯೋಜನಾ ಸಂಯೋಜಕರು, ಪ್ರಜ್ಞಾ ಸಲಹಾ ಕೇಂದ್ರ ಮಂಗಳೂರು ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.medical camp 17-18

ಸಮಾರಂಭದ ಅಧ್ಯಕ್ಷತೆಯನ್ನು ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಸವಿಸ್ತಾರ್, ಜ್ಯೂನಿಯರ್ ಎಕ್ಸೆಕ್ಯೂಟಿವ್,ಆಲ್ಕಾರ್ಗೊ ಪ್ರೈ.ಲಿ. ; ಶ್ರೀ ಹರ್ಬರ್ಟ್,ಸಂವಹನ ವಿಭಾಗದ ಅಧಿಕಾರಿ, ಕೆ.ಎಂಸಿ. ಆಸ್ಪತ್ರೆ ಅತ್ತಾವರ ; ಶ್ರೀ ನಾಗೇಶ್ ಶೆಟ್ಟಿ, ತಾ/ ಪಂ.ಸದಸ್ಯರು ; ಶ್ರೀಮತಿ ವಸಂತಿ, ಪಿ.ಡಿ.ಒ. ಮುತ್ತೂರು ಗ್ರಾ.ಪಂ. ; ಶ್ರೀ ಹಿರಣ್ಯಾಕ್ಷ ಕೋಟ್ಯಾನ್, ಅಧ್ಯಕ್ಷರು, ಸಿ.ಬಿ.ಸಿ. ; ಶ್ರೀ ಚಂದ್ರಹಾಸ ಶೆಟ್ಟಿ, ಅಧ್ಯಕ್ಷರು, ಎಸ್.ಡಿ.ಎಂ.ಸಿ. ; ಗ್ರಾ.ಪಂ.ಸದಸ್ಯರಾದ ಶ್ರೀ ಜೆರಾಲ್ಡ್, ಶ್ರೀ ತಾರಾನಾಥ್ ಮೊದಲಾದವರು ಉಪಸ್ಥಿತರಿದ್ದರು.ಉಪನ್ಯಾಸಕಿ ಶ್ರೀಮತಿ ರಂಜಿತಾ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ನಿರಂಜನ್ ಎ. ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಶ್ರೀ ಸಿಪ್ರಿಯನ್ ಡಿ’ಸೋಜ ವಂದಿಸಿದರು.ವಿವಿಧ ವಿಭಾಗಗಳಲ್ಲಿ 216 ಮಂದಿ ಸಾರ್ವಜನಿಕರು ಉಚಿತ ವೈದ್ಯಕೀಯ ತಪಾಸಣೆಗೆ ಹಾಜರಾಗಿ ಶಿಬಿರದ ಪ್ರಯೋಜನ ಪಡೆದರು.

By Suddi9

Leave a Reply

Your email address will not be published. Required fields are marked *