ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಜೂ 19ರಂದು ಸೋಮವಾರ ವನಮಹೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ‘ಹಸಿರೇ ಉಸಿರು’ ಎಂಬ ಉಕ್ತಿಯೊಂದಿಗೆ ಬೆಳಿಗ್ಗೆ 9.45 ಕ್ಕೆ ಸರಿಯಾಗಿ ವನಮಹೋತ್ಸವ ಶುಭ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಚಾಲನೆ ಪಡೆದು ಶಾಲಾ ಸಂಚಾಲಕರಾದ ವಂದನೀಯ ಫಾದರ್ ಎರಿಕ್ ಕ್ರಾಸ್ತಾ ಇವರ ಉಪಸ್ಥಿತಿಯಲ್ಲಿ ಮುಂದುವರಿಯಿತು.2

ಶಾಲಾ ಮುಖ್ಯಸ್ಥರು ದಿನ ಮಹತ್ವದ ಕುರಿತಾಗಿ ತಿಳಿಸಿದ್ದು ವಿದ್ಯಾರ್ಥಿವೃಂದವು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹಾಡು ಭಾಷಣದೊಂದಿಗೆ ಹೆಚ್ಚಿನ ಮೆರುಗು ನೀಡಿದರು. ಶಾಲಾ ಸಂಚಾಲಕರು ತಮ್ಮ ಹಿತನುಡಿಯೊಂದಿಗೆ ದಿನಮಹತ್ವ ಸಾರಿ, ಪರಿಸರ ಜಾಗೃತಿ ಮೂಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತದನಂತರ ಘೋಷಣೆಯೊಂದಿಗೆ ವಿದ್ಯಾರ್ಥಿಗಳೆಲ್ಲ ದನಿಗೂಡಿದರು. ಕಾರ್ಯಕ್ರಮದ ಪ್ರಮುಖ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವಿದ್ದು, ಇದರಲ್ಲಿ ಧರ್ಮಗುರುಗಳು, ಮುಖ್ಯಸ್ಥರು, ಶಾಲಾ ಶಿಕ್ಷಕರು, ದೈಹಿಕ ಶಿಕ್ಷಕರು ವಿದ್ಯಾರ್ಥಿ ಪ್ರತಿನಿಧಿಗಳು ಆಸಕ್ತಿಯಿಂದ ಭಾಗವಹಿಸಿ ವ್ಯವಸ್ಥಿತವಾಗಿ ಗಿಡ ನೆಟ್ಟು ಆಚರಣೆಗೆ ನಿಜವಾದ ಅರ್ಥ ನೀಡುವಲ್ಲಿ ಸಹಕರಿಸಿದರು.

ಕಾರ್ಯಕ್ರಮವು ಕುಮಾರಿ ಶವi ಇವರ ನಿರೂಪಣೆಯೊಂದಿಗೆ ಸಾಗಿ ಬಂದಿದ್ದು ಕುಮಾರಿ ಅಫ್ರೀಝ ಇವರು ಸ್ವಾಗತಿಸಿದರೆ, ಪವನ್ ಕುಮಾರ್ ಇವರು ಧನ್ಯವಾದ ಗೈದರು. ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ತೆರೆ ಕಂಡಿತು.

By Suddi9

Leave a Reply

Your email address will not be published. Required fields are marked *