ಮಂಗಳೂರು:ಬಿಕರ್ನಕಟ್ಟೆಯ ಸೌಜನ್ಯ ಲೇನ್‍ನಲ್ಲಿರುವ ಮನೆಗೆಮಣ್ಣು ಕುಸಿದು ಭಾರೀ ಹಾನಿ ಸಂಭವಿಸಿದೆ.ಇಲ್ಲಿನ ಸೌಜನ್ಯ ಲೇನ್‍ನಲ್ಲಿರುವ ನೈಗರ್ ಹಿಲ್ಸ್ ನಿವಾಸಿ ಆಲ್ವಿನ್ ಕುಲಾಸೋ ಅವರ ಮನೆ ಅಪಾಯದ ಅಂಚಿಗೆ ತಲುಪಿದೆ.ಜೂನ್ 11 ರ ಭಾನುವಾರ ರಾತ್ರಿ ಪಕ್ಕದ ಸೈಟ್‍ಗೆ ತುಂಬಿಸಲಾಗಿದ್ದ ಮಣ್ಣು ಜರಿದು ಮನೆಗೆ ಬಿದ್ದಿದ್ದು ಅದರ ರಭಸಕ್ಕೆ ಆಲ್ವಿನ್ ಅವರ ಮನೆಯ ಕಂಪೌಂಡ್ ಗೋಡೆ ಕೂಡ ಕುಸಿದು ಬಿದ್ದಿದೆ. ಆರ್‍ಸಿಸಿ ಹಾಗೂ ಮನೆಯ ಹಿಂಭಾಗದ ಗೋಡೆಗೂ ದಕ್ಕೆಯಾಗಿದ್ದು ಮನೆಯೊಳಗೆ ಚರಂಡಿ ನೀರು ಸೇರಿಕೊಂಡಿದೆ.
ಬಿಕರ್ನಕಟ್ಟೆಯ ಸೌಜನ್ಯ ಲೇನ್‍ನಲಿ ್ಲ ನೈಗರ್ ಹಿಲ್ಸ್‍ನಲ್ಲಿ ರೋಬಾಟ್ ಡಿಸೋಜರಿಗೆ ಸೇರಿದ ಜಾಗ ಇದೆ. ಈ ಜಾಗವನ್ನು ದಿನಕರ ಶೆಟ್ಟಿ ಖರೀದಿಸಿದ್ದರು. ಜಾಗದ ಹಿಂಭಾಗದಲ್ಲಿ ದೊಡ್ಡ ಗುಡ್ಡ ಇದ್ದು, ಈ ಗುಡ್ಡವನ್ನು ದಿನಕರ ಶೆಟ್ಟಿ ಅವರು ಸಮತಟ್ಟು ಮಾಡುವಾಗ ಪಕ್ಕದ ಆಲ್ವಿನ್ ಕುಲಾಸೋ ಅವರ ಮನೆ ಕಂಪೌಂಡ್ ತನಕ ತಂದು ಮಣ್ಣು ತುಂಬಿಸಿದ್ದಾರೆ.
ತಡೆಗೋಡೆ ನಿರ್ಮಿಸದೆ ಮಣ್ಣನ್ನು ಹಾಕಿರುವುದರಿಂದ ಈ ಅವಘಡ ಸಂಭವಿಸಿದೆ. ಆಲ್ವಿನ್ ಅವರು ನಗರ ಪಾಲಿಕೆ ಹಾಗೂ ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ಕೂಡ ನೀಡಿದ್ದಾರೆ. ಆದರೆ ಆಲ್ವಿನ್ ಅವರ ದೂರಿಗೆ ಯಾರು ಸ್ಪಂದಿಸಿಲ್ಲ.
ಕಂಪೌಂಡ್ ಗೋಡೆಯನ್ನು ಸರಿಪಡಿಸುವಂತೆ ಪೆಲೀಸರು ಸೂಚನೆ ನೀಡಿದ್ದು ಹಾಗೂ ಪಾಲಿಕೆ ದಿನಕರ ಶೆಟ್ಟಿ ಅವರಿಗೆ ಭದ್ರವಾದ ತಡೆಗೋಡೆ ನಿರ್ಮಿಸುವಂತೆ ನೋಟೀಸ್ ಜಾರಿ ಮಾಡಿದೆ. ಆದರೂ ನೋಟಿಸ್‍ಗೆ ದಿನಕರ ಶೆಟ್ಟಿ ಖ್ಯಾರೇ ಎಂದಿಲ್ಲ. ಮಣ್ಣು ಕುಸಿದು ಆಲ್ವಿನ್ ಅವರ ಮನೆಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಸ್ಪಂದಿಸಲಿ.
————


