ಅಡ್ಡೂರು: ಅಕ್ರಮವಾಗಿ ಗೋವು ಸಾಗಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರು 17 ಜಾನುವಾರುಗಳನ್ನು ರಕ್ಷಿಸಿದ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಅಡ್ಡೂರು ಮಂಜೊಟ್ಟಿ ಎಂಬಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ ವೇಳೆ ಸಿಕ್ಕ ಮಾಹಿತಿಯನ್ನು ಆದರಿಸಿ ದಾಳಿ ನಡೆಸಿದ ಪೊಲೀಸರು ಮೂರು ವಾಹನಗಳಲ್ಲಿ ಕಟ್ಟಿ ಹಾಕಲ್ಪಟ್ಟ ಸ್ಥಿತಿಯಲ್ಲಿದ್ದ ಒಂದು ಎಮ್ಮೆ ಸೇರಿದಂತೆ ಒಟ್ಟು 17 ಜಾನುವಾರುಗಳನ್ನು ರಕ್ಷಿಸಿ 1 ಟೆಂಪೋ ಟ್ರಾವೆಲ್ಲರ್ 1 ರಿಡ್ಸ್ ಕಾರು, 1 ಡಸ್ಟರ್ ಕಾರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆಗಮಿಸುವ ವಿಷಯ ತಿಳಿದೊಡನೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.13 vp t t Ritz tt

* ಹೊಸ ವಾಹನದ ಬಳಕೆ
ವಶಕ್ಕೆ ಪಡೆದಿರುವ ವಾಹನದಲ್ಲಿ ಡಸ್ಟರ್ ಕಾರು ಹೊಸತರದಂತಿದ್ದು ನಂಬರ್ ಪ್ಲೇಟ್ ಹಾಕಲಾಗಿಲ್ಲ ಮೇಲ್ನೋಟಕ್ಕೆ ಕಾರು ಹೊಸತರಂತೆ ಕಂಡರು ಕಾರಿನ ಒಳಗಿನ ಸೀಟುಗಳನ್ನು ತೆಗೆದು ಗೋ ಸಾಗಟಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಲಾಗಿತ್ತು.

13 vp duster

13-1

13 -2

13 -4ಜಾನುವಾರುಗಳ ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದು ಮೇಲ್ನೋಟಕ್ಕೆ ಮಾಂಸದ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ರಕ್ಷಿಸಲಾದ ಜಾನುವಾರುಗಳಲ್ಲಿ ಒಂದು ದನ ಅಸ್ವಸ್ತಗೊಂಡಿದೆ ಎಂದು ತಿಳಿದು ಬಂದಿದೆ. ಎಲ್ಲಾ ಗೋವುಗಳನ್ನು ಗೋಶಾಲೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಜಪೆ ಠಾಣೆಯ ಟಿ.ಡಿ ನಾಗರಾಜ್ ಭರತ್, ಶಶಿ, ಮಹಮ್ಮದ್ , ಚಂದ್ರಮೋಹನ್, ಪ್ರೇಮ್‍ಕುಮಾರ್, ಕಿರಣ್, ಅಶೋಕ್, ಪುರುಷೋತ್ತಮ್, ಜನಾರ್ಧನ, ರಾಮಚಂದ್ರ, ಯೋಗೀಶ್ ,ಗಿರೀಶ ಮತ್ತಿತರರು ದಾಳಿಯ ತಂಡದಲ್ಲಿದ್ದರು.

By Suddi9

Leave a Reply

Your email address will not be published. Required fields are marked *