ಬಂಟ್ವಾಳ: ದೇಶದಲ್ಲಿ ಸುಮಾರು 4,400ಕ್ಕೂ ಮಿಕ್ಕಿ ವಿವಿಧ ಶಾಖೆಗಳ ಮೂಲಕ ಸುಮಾರು 12ಲಕ್ಷಕ್ಕೂ ಮಿಕ್ಕಿ ಪ್ರತಿನಿಧಿಗಳು ಸಂಗ್ರಹಿಸಿದ ಅಗಾಧ ಪ್ರಮಾಣದ ವಿಮಾ ಮೊತ್ತದಲ್ಲಿ ಒಟ್ಟು ರೂ 12ಲಕ್ಷಕ್ಕೂ ಮಿಕ್ಕಿ ಮೊತ್ತದ ಲಾಭಾಂಶವು ದೇಶದಲ್ಲಿ ನಾಗರಿಕರಿಗೆ ಮೂಲಭೂತ ಸೌಲಭ್ಯ ಒದಗಿಸುವುದಕ್ಕಾಗಿ ವಿನಿಯೋಗವಾಗುತ್ತದೆ. ಇದರಿಂದಾಗಿ ಎಲ್ಲೈಸಿ ಸಂಸ್ಥೆಯು ಜನರಲ್ಲಿ ಉಳಿತಾಯದ ಜೊತೆಗೆ ಜೀವನ ಭದ್ರತೆಯನ್ನೂ ನೀಡುವ ಮೂಲಕ ಅಂತರ್ ರಾಷ್ಟ್ರೀಯ ಮಟ್ಟದಲ್ಲೇ ಬೃಹತ್ ಆರ್ಥಿಕ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಎಲ್ಲೈಸಿ ಉಡುಪಿ ವಿಭಾಗೀಯ ಮಾರುಕಟ್ಟೆ ಮೆನೇಜರ್ ರಾಜೇಶ್ ಮುದೋಳ್ ಹೇಳಿದ್ದಾರೆ.

11btl-Lic
ತಾಲ್ಲೂಕಿನ ಬಿ.ಸಿ.ರೋಡ್ ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿಮಾ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಹಿರಿಯ ಪ್ರತಿನಿಧಿ ಮಹಾಬಲ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ವಿಭಾಗೀಯ ಮಾರಾಟ ವ್ಯವಸ್ಥಾಪಕ ಜಯರಾಮ ಶೆಟ್ಟಿ, ಬಂಟ್ವಾಳ ಶಾಖಾಧಿಕಾರಿ ಡಿ.ಬಾಲಕೃಷ್ಣ, ಉಪ ಶಾಖಾಧಿಕಾರಿ ಮಧುಸೂದನ್ ಶುಭ ಹಾರೈಸಿದರು.
ಇದೇ ವೇಳೆ ಜೆಸಿಐ ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್ ಮೂಡುಬಿದ್ರೆ ಇವರಿಂದ ಮಾಹಿತಿ ಕಾರ್ಯಾಗಾರ ಮತ್ತು ನರಿಕೊಂಬು ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳುವಿವಿಧ ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಸಮಿತಿ ಸಂಚಾಲಕರಾದ ವೇದಾವತಿ, ಉಷಾ ಕಿರಣ್, ಯಶೋಧರ ಗೌಡ, ಜತ್ತಪ್ಪ ಪೂಜಾರಿ, ರಮಾದೇವಿ, ಸಂಜೀವ ಮತ್ತಿತರರು ಇದ್ದರು.

ಹಿರಿಯ ಪ್ರತಿನಿಧಿ, ಸಮಾಜ ಸೇವಕ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಇವರನ್ನು ಸನ್ಮಾನಿಸಲಾಯಿತು.ಸಮಿತಿ ಮುಖ್ಯ ಸಂಚಾಲಕ ಲೂಯಿಸ್ ಮಸ್ಕರೇನಸ್ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *