ಬಂಟ್ವಾಳ: ಭ್ರಷ್ಟಾಚಾರ,ಹಗರಣಗಳ ಮೂಲಕ ರಾಜ್ಯದ ಕೊಳ್ಳೆ ಹೊಡೆಯುತ್ತಿರುವ ಸಿದ್ದರಾಮಯ್ಯ ಸರಕಾರ ಕೇಂದ್ರದತ್ತ ಬೊಟ್ಟು ಮಾಡಿ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಜೀತೇಂದ್ರ ಕೊಟ್ಟಾರಿ ಟೀಕಿಸಿದರು. ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಮೂರು ವರ್ಷಗಳ ಸಾಧನೆಯನ್ನು ಬಿತ್ತರಿಸುವ ಮೋದಿ ಫೆಸ್ಟ್ ಅಂಗವಾಗಿ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.10bhbjp

ಕರ್ನಾಟಕ ಸರಕಾರ ಎಲ್ಲ ರಂಗದಲ್ಲೂ ವಿಫಲವಾಗಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಈ ಭ್ರಷ್ಟ ಮತ್ತು ಹಗರಣಗಳ ಸರಕಾರವನ್ನು ಕಿತ್ತೊಗೆಯಬೇಕು ಎಂದ ಅವರು ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರದಂತೆ ಅಭಿವ್ರದ್ದಿ ಚಿಂತನೆಯಳ್ಳ ಬಿಜೆಪಿ ಸರಕಾರ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಕೇಂದ್ರದ ಮೋದಿ ಸರಕಾರ ಮೂರು ವರ್ಷದ ಆಡಳಿತದಲ್ಲಿ ದೇಶವನ್ನು ಅಭಿವ್ರದ್ದಿ ಪಥದತ್ ಕೊಂಡೊಯ್ದಿದೆ. ಜನರಿಗೆ ಸ್ವಾವಲಂಬಿ ಬದುಕನ್ನು ನೀಡಿದೆ ಎಂದ ಕೊಟ್ಟಾರಿ ಮೋದಿಯವರು ತನ್ನ ಸಾಧನೆಯ ಮೂಲಕ ಇಡೀ ಪ್ರಪಂಚವೇ ನೋಡುವಂತೆ ಮಾಡಿದೆ ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸ್ಥಳೀಯ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು. ಬಂಟ್ವಾಳದಲ್ಲಿ ಸಮಗ್ರ ಒಳಚರಂಡಿಯ ವ್ಯವಸ್ಥೆ ಇಲ್ಲದೆ ಕೊಳಚೆ,ತ್ಯಾಜ್ಯ ನೀರು ನೇತ್ರಾವತಿ ನದಿ ಒಡಲು ಸೇರುತ್ತಿದೆ.ಈನಿಟ್ಟಿನಲ್ಲಿ ಪುರಸಭೆ ಮೌನವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದು ಪಕ್ಷದವರಿಗೆ ಸೀಮಿತವಾಗಿ 94 ಸಿಯಡಿ ಹಕ್ಕುಪತ್ರ ಹಂಚುವುದರೊಂದಿಗೆ ತಾರತಮ್ಯವೆಸಗಲಾಗುತ್ತಿದೆ ಎಂದು ಆರೋಪಿಸಿದ ಅವರು ಅಕ್ರಮ ಮರಳುದಂಧೆ ಅವ್ಯವಾಹತವಾಗಿ ನಡೆಯಿತ್ತಿದೆ, ದಿನವೊಂದಕ್ಕೆ ಸಾವಿರಾರು ಲೋಡು ಮರಳು ಅಕ್ರಮವಾಗಿ ಹೊರಜಿಲ್ಲೆಗಳಿಗೆ ಸಾಗಾಟವಾಗುತ್ರಿದ್ದರೂ ರಾಜಕೀಯ ಒತ್ತಡದಿಂದ ಸಂಬಂಧಿಸಿದ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ದೂರಿದರು.

ಇದೇ ವೇಳೆ ಪಕ್ಷದ ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಅವರು ಮಾತನಾಡಿ ಮೋದಿ ನೇತ್ರತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ,ಇದನ್ನು ಜನಸಾಮಾನ್ಯರಿಗೆ ತಿಳಿಹೇಳುವ ಮೂಲಕ ಪಕ್ಷವನ್ನು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರುಕ್ಮಯ ಪೂಜಾರಿ,ಜಿಲ್ಲಾ ವಕ್ತಾರ ವಿಕಾಸ ಪುತ್ತೂರು , ವಕೀಲ ರಾಜಾರಾಮ ನಾಯಕ್,ಪ್ರಮುಖರಾದ ರಮಾನಾಥ ರಾಯಿ, ಗಂಗಾಧರ ಪಲ್ಲಮಜಲು, ಮಹಾಬಲಶೆಟ್ಟಿ, ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ, ಕ್ಷೇತ್ರ ಕಾರ್ಯದರ್ಶಿಗಳಾದ ರಮನಾಥ ರಾಯಿ, ಸೀತಾರಾಮ ಪೂಜಾರಿ, ಸೀಮಾ ಮಾಧವ ಮತ್ತು ಕ್ಷೇತ್ರದ ಪದಾಧಿಕಾರಿಗಳು ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮತ್ತಿತರರು ಹಾಜರಿದ್ದರು. ಕ್ಷೇತ್ರದ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ಸ್ವಾಗತಿಸಿದರು. ಇನ್ನೊರ್ವಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ನಿರೂಪಿಸಿ ,ವಂದಿಸಿದರು.

By Suddi9

Leave a Reply

Your email address will not be published. Required fields are marked *