ಬಂಟ್ವಾಳ: ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರಿಮಾರ್ ಸಂಪರ್ಕ ರಸ್ತೆ ಕಾಂಕ್ರೀಟಿಕರಣಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಶನಿವಾರ ಶಿಲಾನ್ಯಾಸ ನೆರವೇರಿಸಿದರು.ರಸ್ತೆ ಕಾಂಕ್ರೀಟಿಕರಣಕ್ಕೆ 15 ಲಕ್ಷ ರುಪಾಯಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಮಂಗಳೂರು ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ಜಬ್ಬಾರ್ ಬೋಳಿಯಾರ್, ಪುದು ಗ್ರಾ.ಪಂ.ಉಪಾದ್ಯಕ್ಷ ಹಾಶೀರ್ ಪೇರಿಮಾರ್ ಸದಸ್ಯರಾದ ರಮ್ಲಾನ್, ಇಕ್ಬಾಲ್ ಸುಜೀರ್, ತಾ.ಪಂ. ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಮಹಮ್ಮದ್ ಶಾಫಿ, ರಫೀಕ್ ಪೇರಿಮಾರ್, ಮಜೀದ್ ಪೇರಿಮಾರ್, ಸಿರಾಜ್ ಪೇರಿಮಾರ್, ಉನೈಸ್ಬಾಲ್ದಬೆಟ್ಟು ಕಿಲರಿಯಾ ಜುಮ್ಮಾ ಮಸೀದಿ ಖತೀಬರು ಹಾಗೂ ಎಂಜಿನಿಯರ್ ಹಾಜರಿದ್ದರು.
