ಬಂಟ್ವಾಳ: ಸಮಾಜಬಾಂಧವರು ಪ್ರೀತಿ ಪೂರ್ವಕವಾಗಿ ಭಕ್ತಿಯಿಂದ ತಮ್ಮ ಹೆತ್ತವರ ಸೇವೆ ಮಾಡಬೇಕು ಎಂದು ಕುಡಾಳ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ ಶ್ರೀ ಮಠ್ ಸಂಸ್ಥಾನ್ ದಾಭೋಲಿಯ ಕಿರಿಯ ಶ್ರೀಗಳಾದ ದತ್ತಾನಂದ ಸರಸ್ವತಿ ಸ್ವಾಮೀಜಿ ನುಡಿದರು.ದ.ಕ.ಜಿಲ್ಲಾ ಪ್ರವಾಸದಲ್ಲಿರುವ ಶ್ರೀಗಳು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಳದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನಗೈದು ಹಿಂದುಳಿದ ಕುಟುಂಬಕ್ಕೂ ಸಹಾಯಹಸ್ತ ನೀಡುವ ಕಾರ್ಯದಲ್ಲೂ ತೊಡಗಿಸಬೇಕೆಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಡಿ.ರಮೇಶ ನಾಯಕ್ ಮೈರಾ,ಗೌರವಾಧ್ಯಕ್ಷರಾದ ಎಂ.ಎಂ.ಪ್ರಭು ಮಂಗಳೂರು,ಗಣಪತಿ ಶೆಣ್ಯೆ ಡೆಚ್ಚಾರು,ಸದಾಶಿವ ರಾವ್ ,ಗೌರವ ಸಲಹೆಗಾರರಾದ ವೇ.ಮೂ.ಸಂಜೀವ ಭಟ್ ಕಟ್ಟಣಿಗೆ,ನಿತ್ಯಾನಂದ ಭಟ್ ಬರೆಪ್ಪಾಡಿ,ಉಪಾಧ್ಯಕ್ಷರಾದ ಸಂಜಯ್ ಪ್ರಭು ಮಂಗಳೂರು,ನಾರಾಯಣ ನಾಯಕ್ ದರ್ಬೆ,ಪ್ರೇಮನಾಥ ನಾಯಕ್ ಸೋಲ್ತಾಡಿ,ರಾಜಾರಾಮ ನಾಯಕ್ ಕಲಾಯಿ,ವಾಸುದೇವ ನಾಯಕ್ ಇನೋಳಿ,ಸುಧಾಕರ ಶೆಣ್ಯೆ ಮರೋಳಿ, ಪ್ರ.ಕಾರ್ಯದರ್ಶಿ ಡಾ.ವಿಜಯಲಕ್ಮೀ ನಾಯಕ್ ಮಂಗಳೂರು, ಕಾರ್ಯದರ್ಶಿಗಳಾದ ಡಾ.ಸುಚೇತ ಶೆಣ್ಯೆ,ರಮೇಶನಾಯಕ್ ಗುಂಡೂರು,ಚಂದ್ರಶೇಖರ ಹೆನ್ನೂರು,ಕೋಶಾಧಿಕಾರಿ ಮೋಹನ ಪ್ರಭು ಅಡ್ಯೆ,ಬಿ.ಸಿ.ರೋಡಿನ ನ್ಯಾಯವಾದಿ ರಾಜಾರಾಮ ನಾಯಕ್ ಸಹಿತ ಸಮಿತಿ ಪದಾಧಿಕಾರಿಗಳು,ಸದಸ್ಯರು, ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಇದೇ ವೇಳೆ ಬಿಜೆಪಿ ಮುಖಂಡ ರಾಜೇಶ ನಾಯಕ್ ಉಳಿಪಾಡಿಗುತ್ತು,ಬಂಟ್ವಾಳ ಪುರಸಭಾಸದಸ್ಯ ದೇವದಾಸ ಶೆಟ್ಟಿ ಮಾದಲಾದ ಗಣ್ಯರು ಶ್ರೀಗಳನ್ನು ಭೇಟಿಯಾಗಿ ಫಲ ಮಂತ್ರಾಕ್ಷತೆ ಪಡೆದರು. ಇದಕ್ಕೂ ಮೊದಲ ಶ್ರೀ ದತ್ತಾ ಸರಸ್ವತಿ ಸ್ವಾಮೀಜಿಯವರು ಪುರಪ್ರವೇಶಿ ಶ್ರೀ ತಿರುಮಲ ವೆಂಕಟರಮಣ ದೇವರ ದರ್ಶನ ಪಡೆದರು.ಅಗಮಿಸಿದ ಎಲ್ಲಾ ಫಲ ಮಂತ್ರಾಕ್ಷತೆ ವಿತರಿಸಿದರು.ಗುರು ಕಾಣಿಕೆ ಸಮರ್ಪಣೆ,ಪಾದುಕಪೂಜೆ, ಗುರುಭೋಜನ,ಸಮಾರಾಧನೆಯು ನಡೆಯಿತು.
