ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಎ.15ರಿಂದ ಶನಿವಾರ ಸಾಯಾಂಕಾಲ ಪ್ರಾರ್ಥನೆಯೊಂದಿಗೆ ಪುಣ್ಯಾಹದೊಂದಿಗೆ ಪ್ರತಿದಿನ ವಿವಿಧ ಧಾರ್ಮಿಕ ಕ್ರಿಯೆಗಳು ಹಾಗೂ ಪ್ರಾಯಶ್ಚಿತ್ತಾದಿ ಹೋಮಗಳು ಜರುಗಿದ ಬಳಿಕ ಶ್ರೀ ದುರ್ಗಾಪರಮೇಶ್ವರೀ, ಶ್ರೀ ರಾಜರಾಜೇಶ್ವರೀ , ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ಹಾಗೂ ಶ್ರೀ ಕ್ಷೇತ್ರಪಾಲ ದೇವರು ಅಲ್ಲದೆ ಶ್ರೀ ಕೊಡಮಣತ್ತಾಯಿ ದೈವದ ಬಾಲಾಲಯ ಪ್ರತಿಷ್ಠೆಯು ವೆಂಕಟೇಶ್ ತಂತ್ರಿ , ಸುಬ್ರಹಣ್ಯ ತಂತ್ರಿ, ಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಗುರುವಾರ 11-57ಕ್ಕೆ ನಡೆಯುವ ಕರ್ಕಾಟಕ ಲಗ್ನ ಸುಮೂಹೂರ್ತದಲ್ಲಿ ಜರುಗಿತು.

20 -2

polali

20 vp polali homa

20 vp sayana pooje ಬೆಳಗ್ಗೆ ಗಣಹೋಮ ಕಲಶ ಪೂಜೆಗಳು ಆಧಿವಾಸ ಹೋಮ ಬಾಲಾಲಯದಲ್ಲಿ ಶ್ರೀದೇವರುಗಳ ಪ್ರತಿಷ್ಟೆ ಕಲಶಾಭಿಷೇಕ, ಮಹಾಪೂಜೆಯು ಜರುಗಿತು. ದೇವಳದ ಪ್ರಧಾನ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ರಾಮ್ ಭಟ್, ಅನಂತ ಭಟ್, ಪದ್ಮನಾಭ ಭಟ್, ರಾಜ ಐತಾಳ್, ಮಾಧವ ಮಯ್ಯ, ಗಿರೀಶ್ ಭಟ್, ಮಾಧವ ಭಟ್, ವಾಸುದೇವ ಮಯ್ಯ ಮತ್ತು ಇತರ ಅರ್ಚಕರು ಪೂಜೆಯಲ್ಲಿ ಪಾಲ್ಗೋಂಡಿದ್ದರು.

20-1

20 vp balalaya 1

20 vp balalayake serida janaru

(ಇಂದಿನಿಂದ ಪೊಳಲಿ ದೇವಳದಲ್ಲಿ ಬೆಳಗ್ಗೆ 7 ಗಂಟೆಗೆ ಪೂಜೆ ನಡೆದು ಮಧ್ಯಾಹ್ನದ ಪೂಜೆಯು ಬೆಳಗ್ಗೆ 8 ಗಂಟೆಗೆ ನಡೆಯುವುದು ಭಕ್ತಾಧಿಗಳಿಗೆ 9 ಗಂಟೆ ತನಕ ಪ್ರಸಾದ ವಿತರಿಸುವುದು , ರಾತಿಯ ಪೂಜೆಯು ರಾತ್ರಿ 7 ಗಂಟೆಗೆ ಪೊಜೆ ನಡೆಯಲಿದೆ ಇನ್ನಿತರ ಯಾವುದೇ ಸೇವೆ ನಡೆಯುವುದಿಲ್ಲ ಮಂಗಳವಾರ ಗಾಯತ್ರಿ ಪೂಜೆ ನಡೆಯುತ್ತದೆ. ಷಷ್ಟಿ ಕಳೆದ ನಂತರ ನವೆಂಬರ್ 26 ರ ನಂತರ ದೇವರ ಬ್ರಹ್ಮಕಲಸದವರೆಗೆ ಸಾವಿರ ಸೀಮೆಗೆ ಸಂಭಂದಿಸಿದವರು ಯಾವುದೇ ಮದುವೆ ಇನ್ನಿತರ ಕಾರ್ಯಕ್ರಮ ಮಾಡುವಂತಿಲ್ಲ .)ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯ ಪೊಳಲಿ.

20 vp balalaya prathisteya prarthne

20 vp balalaya prathistege janaru

20--3

20-1

20-2

20 6

20-8

20-9

20-81

20-100ಬಳಿಕ ಅನ್ನ ಸಂತರ್ಪಣೆ ಜರುಗಿತು. ಶ್ರೀ ಕ್ಷೇತ್ರದ ನವೀಕರಣಕ್ಕೆ ಚಾಲನೆಯಾಗಿದ್ದು ಈ ಮಹತ್ಕಾರ್ಯದಲ್ಲಿ ಉಸ್ತುವರಿ ಅರಣ್ಯ ಸಚಿವರಾದ ಬಿ. ರಮಾನಾಥ ರೈ, ಮಾಜಿ ಸಚಿವ, ಬಿ ನಾಗರಾಜ ಶೆಟ್ಟಿ, ರಾಜೇಶ್ ನಾೈಕ್ ಉಳಿಪಾಡಿಗುತ್ತು,ಚಿತ್ತರಂಜನ್ ಶೆಟ್ಟಿ ಪಡು, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ಉದಯ ಆಳ್ವ ಉಳಿಪಾಡಿಗುತ್ತು , ಕೃಷ್ಣ ಕುಮಾರ್ ಪೂಂಜ,  ಜೀವರಾಜ್ ಶೆಟ್ಟಿ ಅಮ್ಮುಂಜೆ ಗುತ್ತು, ರಂಗನಾಥ ಶೆಟ್ಟಿ ಅಮ್ಮುಂಜೆ ಗುತ್ತು, ಮಹೇಶ್ ಆಳ್ವ ಉಳಿಪಾಡಿಗುತ್ತು, ಕೃಷ್ಣರಾಜ ಮಾರ್ಲ, ರಮೇಶ್ ರಾವ್ ಚೇರಾ, ವೆಂಕಟೇಶ್ ನಾವಡ, ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆ ಗುತ್ತು, ತಾ. ಪಂ ಸದಸ್ಯ ಯಶವಂತ ಪೂಜಾರಿ, ಚಂದ್ರಶೇಖರ ಭಂಢಾರಿ ಮತ್ತು ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೆಸರರಾದ ಯು. ತಾರನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮತ್ತು ಸಾವಿರ ಸೀಮೆಯ ಭಕ್ತಾಧಿಗಳು ಶ್ರೀ ದೇವಿಯ ಮಹತ್ಕಾರ್ಯದಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *