ವಿಟ್ಲ:ಪರೀಕ್ಷೆಯ ಸಮಯ ಮುಗಿದ ಬಳಿಕ ಮಕ್ಕಳ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ‘ಸಾಹಿತ್ಯ ರಚನಾಕಮ್ಮಟ’ ವು ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ದಿನಗಳ ಕಾಲ ನಡೆಯಿತು. ಮೊದಲನೇ ದಿನದಂದು ಶ್ರೀ ರಾಜರಾಮ ವರ್ಮ ಮಕ್ಕಳ ಸಾಹಿತ್ಯ ಲೋಕ ಇದರ ಕಾರ್ಯದರ್ಶಿ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಶ್ರೀ ಭಾಸ್ಕರ ಅಡ್ವಾಳರವರು ಕವನ ರಚನೆ ಕಾರ್ಯಾಗಾರ ನಡೆಸಿಕೊಟ್ಟರು.
2ನೇ ದಿನ ಅಶೋಕ ಕುಮಾರ್ ಪೈ ಮಂಗಳೂರು ಹಾಗೂ ಶ್ರೀಮತಿ ಮಾಲತಿ ಶೆಟ್ಟಿ ಪತ್ರಿಕಾ ಸಂಪಾದಕಿ, ಕಥೆ ರಚನೆ ಕಾರ್ಯಾಗಾರ ನಡೆಸಿಕೊಟ್ಟರು. 38 ಮಕ್ಕಳು ತಂಬಾ ಆಸಕ್ತಿಯಿಂದ ಭಾಗವಹಿಸಿ, ಕಥೆ, ಕವನಗಳನ್ನು ರಚಿಸಿ, ಸಂತೋಷಪಟ್ಟರು. ಸಮಾರೋಪದಲ್ಲಿ ಅವರೊಂದಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣಯ್ಯ ಕೆ, ಮುಖ್ಯೋಪಾಧ್ಯಾಯರಾದ ಶ್ರೀ ವಿಶ್ವಾನಾಥ ಗೌಡ ಕುಳಾಲು ಉಸಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಸುಜಾತ ಕೆ ರೈ, ರಮಾ ಪಿ ಆರ್ ಸಹಕರಿಸಿದರು.
