ಬಂಟ್ವಾಳ: ಬಂಟ್ವಾಳ ಕೇಂದ್ರ ಸ್ಥಾನದಲ್ಲಿ ಮಿನಿ ವಿಧಾನಸೌಧ ಸಹಿತ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ಬಿ.ಸಿ.ರೋಡುನಿಂದ ಜಕ್ರಿಬೆಟ್ಟುವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು,ಜೊತೆಗೆ ಮಣಿಹಳ್ಳ ಸೇತುವೆ ಅಗಲೀಕರಣಗೊಳಿಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ನೂತನವಾಗಿ ಅಸ್ತಿತ್ವಗೊಂಡ ಬಂಟ್ವಾಳ ತಾಲೂಕಿನ ಅರಳ ಗ್ರಾಮ ಪಂಚಾಯತ್‍ನ ಮಹಾತ್ಮಾ ಗಾಂ„ ರಾಷ್ಟ್ರೀಯ ಉದ್ಯೋಗ ಖಾತರಿ 2015-16ನೇ ಸಾಲಿನ ಯೋಜನೆಯಲ್ಲಿ 19 ಲ.ರೂ. ವೆಚ್ಚದಲ್ಲಿ ಎರ್ಮಾಳದಲ್ಲಿ ನಿರ್ಮಿಸಲಾದ ಭಾರತ್ ನಿರ್ಮಾಣ್ ರಾಜೀವ ಗಾಂ„ ಸೇವಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ನೂತನ ಗ್ರಾಮ ಪಂಚಾಯತ್‍ಗಳ ರಚನೆಯಾಗಿದ್ದು ಹೆಚ್ಚಿನ ಗ್ರಾಮ ಪಂಚಾಯತ್‍ಗಳಿಗೆ ನೂತನ ಕಟ್ಟಡ ನಿರ್ಮಾಣವಾಗಿದೆ. ಉಳಿದ ಗ್ರಾ.ಪಂ.ಗಳಿಗೆ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದೆ ಎಂದರು.

arala
ಸಂಗಬೆಟ್ಟುನಲ್ಲಿ ಒಟ್ಟು 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು 36 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಕರೋಪಾಡಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಅಲ್ಲದೇ ನರಿಕೊಂಬು-ಶಂಭೂರುನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಇದೇ 15ರಂದು ಶಿಲಾನ್ಯಾಸ ನೆರವೇರಲಿದೆ. ಇದರಿಂದ ತಾಲೂಕಿನ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ ಎಂದರು.
ಮೂಲರಪಟ್ನದಲ್ಲಿ ಫಲ್ಗುಣಿ ಹೊಳೆಗೆ ಸುಮಾರು 5ಕೋಟಿ ರೂ. ವೆಚ್ಚದ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು ಈ ಪ್ರದೇಶದಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವುದರ ಜೊತೆ ಅಂತರ್ಜಲ ವೃದ್ಧಿಯಾಗುವುದು. ಈಗಾಗಲೇ ಇಲ್ಲಿನ ಅಣ್ಣಳಿಕೆ-ಕರ್ಪೆ-ಸಿದ್ಧಕಟ್ಟೆ ಸಂಪರ್ಕ ರಸ್ತೆ ವಿಸ್ತರಣೆ ಮತ್ತು ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಅಣ್ಣಳಿಕೆ-ಕರಿಮಲೆ-ವಾಮದಪದವು ರಸ್ತೆ ವಿಸ್ತರಣೆ ಮತ್ತು ಡಾಮರೀಕರಣಗೊಳಿಸಲು ಅನುದಾನ ಮಂಜೂರಾಗಿದೆ. ಅರಳ ಗ್ರಾಮದ ಕಲ್ಪನೆ, ಅರಳ ಶುಂಠಿಹಿತ್ಲು ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸುಮಾರು 3 ಕೋಟಿ ರೂ. ಅನುದಾನ,ಮೂಲರಪಟ್ನ-ಬಡಗಬೆಳ್ಳೂರು ಸಂಪರ್ಕ ಸೇತುವೆಗೆ 1 ಕೋ.ರೂ. ಅನುದಾನ, ಅರಳ ಎಸ್‍ಸಿ,ಎಸ್ಟಿ ಕಾಲನಿ ರಸ್ತೆ ಅಭಿವೃದ್ಧಿಗೆ 1 ಕೋ.ರೂ. ಅನುದಾನ ಮಂಜೂರುಗೊಳಿಸಲಾಗಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಗ್ರಾಮ ಪಂಚಾಯತ್ ಸ್ಥಳೀಯ ಸರಕಾರದಂತೆ ಕಾರ್ಯ ನಿರ್ವಹಿಸಲು ಸರಕಾರ ಹಣಕಾಸು, ಆಡಳಿತ, ಜವಾಬ್ದಾರಿ ಈ ಮೂರನ್ನು ಒದಗಿಸಿದಾಗ ಉತ್ತಮ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಗುತ್ತದೆ. ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಒಟ್ಟಾಗಿ ಗ್ರಾಮದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಬೇಕು. ಇದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯವಾಗುವುದು ಎಂದು ಹೇಳಿದರು.
ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ತಿಂಗಳಿಗೆ 12 ಸಾವಿರ ರೂ. ಕನಿಷ್ಠ ವೇತನ ದೊರಕಬೇಕು. ಆಗ ಹೆಚ್ಚು ಜನರು ಉದ್ಯೋಗ ಖಾತರಿ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಬಗ್ಗೆ ಸರಕಾರ ಚಿಂತನೆ ನಡೆಸಬೇಕು ಎಂದು ಹೇಳಿದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ,ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ,ಸದಸ್ಯೆ ಮಂಜುಳಾ ಸದಾನಂದ,ತಾ.ಪಂ. ಮುಖ್ಯಕಾರ್ಯನಿರ್ವಹಣಾ„ಕಾರಿ ಸಿಪ್ರಿಯನ್ ಮಿರಾಂದ, ಗ್ರಾ.ಪಂ.ಅಧ್ಯಕ್ಷೆ ತುಂಗಮ್ಮ,ಸದಸ್ಯರಾದ ಎಂ.ಬಿ. ಅಶ್ರಫ್,ರಂಜಿನಿ ನಾಯ್ಕ, ಜೈನಾಬ್,ಲಕ್ಷ್ಮೀಧರ ಪೂಜಾರಿ,ಕಲ್ಯಾಣಿ, ಅಭಿಯಂತರ ಜಗದೀಶ್ ನಿಂಬಾಳ್ಕರ್ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.
ಇದೇ ವೇಳೆ ಪಂ.ಅ. ಅ„ಕಾರಿ ವೈಲೆಟ್ ಮಿನೇಜಸ್ ಹಾಗೂ ಕಟ್ಟಡ ಕಾಮಗಾರಿಗೆ ಸಾಮಾಗ್ರಿ ಪೂರೈಸಿದ ರಂಜನ್ ಅವರನ್ನು ಸಮ್ಮಾನಿಸಲಾಯಿತು.
ಗ್ರಾ.ಪಂ. ಉಪಾಧ್ಯಕ್ಷ ಜಗದೀಶ್ ಆಳ್ವ ಅವರು ಸ್ವಾಗತಿಸಿದರು. ಪಂಚಾಯತ್ ಪ್ರಭಾರ ಅಭಿವೃದ್ಧಿ ಅ„ಕಾರಿ ವೈಲೆಟ್ ಮಿನೇಜಸ್ ವರದಿ ವಾಚಿಸಿದರು. ಸದಸ್ಯ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ ವಂದಿಸಿದರು. ಸದಸ್ಯ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *