ಬಂಟ್ವಾಳ : ಸಾಹಿತ್ಯ ಮತ್ತು ಕಲೆಯನ್ನು ಪ್ರೀತಿಸುವ ಮನಸ್ಸು ಇಲ್ಲದವರು ಪಶುವಿಗೆ ಸಮಾನರು,ಹೃದಯವಂತಿಕೆ,ಮಾನವೀಯತೆ,ಸತ್ಯನಿಷ್ಠೆಯ ವಿಶ್ವಮಾನವತ್ವ ಬೆಳೆಸಿಕೊಳ್ಳಲು ಸಾಹಿತ್ಯ ಕ್ಷೇತ್ರದ ಒಡನಾಟ ಅತೀ ಅಗತ್ಯ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಿದ್ಧಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಠಾರದ ಏರ್ಯ ಚಂದ್ರಭಾಗಿ ರೈ ಸಭಾಂಗಣದ ಐ.ಕೃಷ್ಣರಾಜ ಬಲ್ಲಾಳ್ ವೇದಿಕೆಯಲ್ಲಿ ಶನಿವಾರ ಜರಗಿದ ಬಂಟ್ವಾಳ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡವೆಂದರೆ ಕೇವಲ ಭಾಷೆಯಲ್ಲ, ಅಕ್ಷರಗಳ ಸಮೂಹವೂ ಅಲ್ಲ ಅದು ನಮ್ಮನ್ನು ನಾವು ತೆರೆದುಕೊಳ್ಳುವ ವಿಶಿಷ್ಠ ಮಾಧ್ಯಮ. ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳು ತಮ್ಮದೇ ಆದ ಸಾಹಿತ್ಯ ಪ್ರೀತಿಯಿಂದ ಇಡೀ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕು ಸಾಹಿತ್ಯ ಕ್ಷೇತ್ರ ಮಾತ್ರವಲ್ಲ ವ್ಯಾಪಾರ, ಸಹಕಾರ ಕ್ಷೇತ್ರದಲ್ಲೂ ಸಾಧನೆಯ ಮೂಲಕ ರಾಜ್ಯದ ಗಮನಸೆಳೆದಿದೆ. ಸಿದ್ದಕಟ್ಟೆಯ ತಾಲೂಕು ಸಮ್ಮೇಳನ ಜಿಲ್ಲಾ ಸಮ್ಮೇಳನವನ್ನೂ ಮೀರಿಸುವ ರೀತಿಯಲ್ಲಿ ಅದ್ಧೂರಿಯಾಗಿ ಆಯೋಜನೆ ಗೊಂಡಿದೆ ಎಂದರು.
ವಿಧಾನ ಪರಿಷತ್ತು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅವರು ತನ್ನ ಅನುದಾನದಿಂದ ಪ್ರೌಢಶಾಲೆಗೆ ಅಳವಡಿಸಿದ ಸೋಲಾರ್ ವ್ಯವಸ್ಥೆಯನ್ನು ಅವರು ಅನಾವರಣಗೊಳಿಸಿ ಮಾತನಾಡಿ ದ.ಕ. ಜಿಲ್ಲೆಯ 50 ಶಾಲೆಗಳಿಗೆ ತನ್ನ ಅನುದಾನದಿಂದ ಸೋಲಾರ್ ಯೂನಿಟ್ ವ್ಯವಸ್ಥೆ ನೀಡಲಾಗಿದೆ. ಸೋಲಾರ್ ವ್ಯವಸ್ಥೆಯಿಂದ ಶಾಲೆಗೆ ಅಗತ್ಯವಾದ ವಿದ್ಯುತ್ ವ್ಯವಸ್ಥೆ ದೊರಕುವುದರ ಜೊತೆಗೆ ಉಳಿಕೆಯಾಗುವ ವಿದ್ಯುತ್‍ನ್ನು ಮೆಸ್ಕಾಂಗೆ ವಿತರಿಸಲಾಗುವುದು. ಇದರ ಹಣವನ್ನು ವಿದ್ಯಾರ್ಥಿಗಳ ಸಾಹಿತ್ಯ ಚಟುವಟಿಕೆಗಳಿಗೆ ಬಳಸಬೇಕು ಎಂದ ಅವರು ಕನ್ನಡ ಭವನಕ್ಕೆ ತನ್ನ ಅನುದಾನದಿಂದ 2 ಲ.ರೂ. ನೀಡುವುದಾಗಿ ಘೋಷಿಸಿದ ಅವರು ಸರಕಾರದ ವತಿಯಿಂದ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಪ್ರಸ್ತಾವಿಸಿದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಮೋಹನ್ ರಾವ್ ಅವರು ಆಶಯ ನುಡಿ ನೀಡಿದರು. ವಿಶ್ರಾಂತ ಪ್ರಾಧ್ಯಾಪಕ,ಲೇಖಕ ಪುಂಡಿಕಾೈ ಗಣಪಯ್ಯ ಭಟ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಅವರು ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಅವರು ಸ್ಮರಣ ಸಂಚಿಕೆ ಪ್ರಸಿದ್ಧವನ್ನು ಬಿಡುಗಡೆಗೊಳಿಸಿದರು.
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ರಮೇಶ ಬಾಯಾರು ಅವರ ಅಮ್ಮನ ಅಕ್ಕರೆ, ಸರಿತಾ ಶೆಟ್ಟಿ ಪುಚ್ಚಮೊಗರು ಅವರ ನದಿ ನೀರು ಮತ್ತು ಸುನೀತ್ ಶೆಟ್ಟಿ ಅವರ ನನ್ನ ನೆರಳು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಸ್ವಾಗತ ಸಮಿತಿ ಕೋಶಾಧಿಕಾರಿ ಡಾ| ಸುದೀಪ್ ಕುಮಾರ್ ಅವರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕೋಶಾಧಿಕಾರಿ ಡಾ. ಅಜಕ್ಕಳ ಗಿರೀಶ್ ಭಟ್ ಅವರು ಸಮ್ಮೇಳನಾಧ್ಯಕ್ಷರ ಕೃತಿಗಳ ಅವಲೋಕನ ಮಾಡಿದರು. ಜಿ . ಪಂ.ಸದಸ್ಯ ತುಂಗಪ್ಪ ಬಂಗೇರ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.,ಡಾ. ಪ್ರಭಾಚಂದ್ರ ಜೈನ್,ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್,ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಗ್ರಾ.ಪಂ.ಅಧ್ಯಕ್ಷರುಗಳಾದ ಗುಲಾಬಿ ಶೆಟ್ಟಿ, ದಿನೇಶ್ ಸುಂದರ್ ಶಾಂತಿ, ಜಿಲ್ಲಾ ಕ.ಸಾ.ಪ. ಗೌ.ಕಾರ್ಯದರ್ಶಿ ಬಿ.ತಮ್ಮಯ್ಯ,ಬೋಗಾಡಿ ವಿಠಲ ಶೆಟ್ಟಿ,ಫ್ರೊ. ರಾಮಚಂದ್ರ,ಸ್ವಾಗತ ಸಮಿತಿ ಗೌರವಾಧ್ಯಕ್ಷ ಅರ್ಕಕೀರ್ತಿ ಇಂದ್ರ, ಪ್ರ.ಕಾರ್ಯದರ್ಶಿ ರಮಾನಂದ,ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್,ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.,ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ. ಪ್ರಭಾಚಂದ್ರ ಜೈನ್,ಸಂಚಾಲಕ ಪದ್ಮರಾಜ ಬಲ್ಲಾಳ್ ವೇದಿಕೆಯಲ್ಲಿದ್ದರು.
ಸಮಿತಿ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಗೋಪಿನಾಥ್ ರೈ,ಪ್ರಫುಲ್ಲ ರೈ,ಲೋಕಯ್ಯ ಗಾಡಿಪಲ್ಕೆ,ಹರಿಪ್ರಸಾದ್ ಶೆಟ್ಟಿ, ಮಂದಾರತಿ ಎಸ್. ಶೆಟ್ಟಿ,ಸೀತಾರಾಮ ಶಾಂತಿ,ಸೀತಾರಾಮ ಶೆಟ್ಟಿ, ಸಂಜಯ್ ಬಿ.ಎಸ್.,ಮಹೇಶ್ ಕುಮಾರ್,ಮಮತಾ ಪಿ.,ಎನ್.ಪದ್ಮನಾಭ ರೈ, ಫ್ರೊ. ಸತ್ಯನಾರಾಯಣ ಭಟ್,ರಮೇಶ್ ಭಟ್ ಮಾದೇರಿ,ದುರ್ಗಾದಾಸ್ ಶೆಟ್ಟಿ ಕರಿಂಕಿಜೆ ಮತ್ತಿತರರು ಭಾಗವಹಿಸಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಸ್ವಾಗತಿಸಿದರು. ಬಂಟ್ವಾಳ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ವಂದಿಸಿದರು. ಹೋಬಳಿ ಸಂಚಾಲಕ ಗೋಪಾಲ ಅಂಚನ್ ಮತ್ತು ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ-ಸಾಹಿತ್ಯಕ್ಕೆ ಸಿದ್ಧಕಟ್ಟೆಯ ಕೊಡುಗೆ,ಯಕ್ಷಗಾನ ಸಾಹಿತ್ಯ,ಸಾಹಿತ್ಯ ಪ್ರಸ್ತುತಿ,ಹಾವು-ನಾವು-ಪರಿಸರ ಕುರಿತು ವಿಚಾರ ಗೋಷ್ಠಿ ನಡೆಯಿತು.

