ವಿಟ್ಲ: ಮಾರ್ಚ್ 14: “ಇಂದಿನ ಯಶಸ್ವಿ ಹೆಜ್ಜೆಯು ಮುಂದಿನ ಉಜ್ವಲ ಭವಿಷ್ಯಕ್ಕೆ ಸೋಪಾನ” ಎಂದು ಶಾಲಾ ಆಡಳಿತಾಧಿಕಾರಿಯಾದ ಸಿ. ಶ್ರೀಧರ್‍ರವರು ಹೇಳಿದ್ದಾರೆ.
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹತ್ತನೇ ತರಗತಿಯವರಿಗೆ ನಡೆದ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತಾನಾಡಿದರು. “ಇಂದಿನ ಯಶಸ್ವಿ ಹೆಜ್ಜೆಯು ಭವಿಷ್ಯದ ಜೀವನ ಸುಗಮವಾಗಲು ಸಹಕರಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ಪ್ರೀತಿಯಲ್ಲಿ ಮಾಡುವ ವೃತ್ತಿಯನ್ನು ಅವಲಂಬಿಸಿ” ಎಂದರು . ಶಾಲಾ ಸಂಚಾಲಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಪ್ರಹ್ಲಾದ್ ಜೆ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ “ ನಿಮ್ಮ ಭವಿಷ್ಯವು ಭದ್ರವಾಗಿರಲಿ, ಸಂಸ್ಥೆಯ ಬಗ್ಗೆ ಅಭಿಮಾನವಿರಲಿ ಹೆಮ್ಮೆಯ ವಿದ್ಯಾರ್ಥಿಗಳಾಗಿ” ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ| ಬಿ.ಎಸ್. ನಾೈಕ್ , ಕಾರ್ಯದರ್ಶಿಯಾದ ನಾರಾಯಣ ಶೆಟ್ಟಿ ಕೊಂಬಿಲ ಹಾಗೂ ಮುಖ್ಯೋಪಾಧ್ಯಾಯಿನಿಯರಾದ , ವಿಜಯಲಕ್ಷ್ಮೀ.ವಿ.ಶೆಟ್ಟಿ ಮತ್ತು ಗ್ರೇಸ್ ಪಿ ಸಲ್ಡಾನ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುರಕ್ಷಾ ಪಿ.ಎಸ್ ಸ್ವಾಗತಿಸಿ , ವಿಂಧ್ಯಾ ಕೈಂತಾಜೆ ವಂದಿಸಿದರು. ಸಂಪತ್ ಹೆಗ್ಡೆ ಹಾಗೂ ಆಶ್ರಿತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
