ಕೈಕಂಬ: ಜನರ ಆರೋಗ್ಯವನ್ನು ಕಮರ್ಷಿಯಲ್ ರೀತಿಯಲ್ಲಿ ನೋಡದೆ ಬಡ ಜನರ ಮೇಲೆ ಹೊರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ವೈದ್ಯರು ಬಡ ಜನರಿಗೆ ತೊಂದರೆಯಾಗದಂತೆ ಸ್ಪಂದಿಸಬೇಕು ಎಂದು ಕೇಮಾರು ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ನುಡಿದರು. ಅವರು ಗುರುವಾರ ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟ್ ರೀಸರ್ಚ್ ಫೌಂಡೇಷನ್(ರಿ) ಗಂಜೀಮಠ “ಮಧುಮೇಹ ಮುಕ್ತ ಭಾರತ” ಜನ ಜಾಗೃತಿ ಅಭಿಯಾನದ ಅಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. 
ಅಂತರಾಷ್ಟ್ರೀಯ ಮಧು ಮೇಹ ದಿನವನ್ನು ನೀಲ ವೃತ್ತದ ಮೂಲಕ ಗುರುತಿಸಲಾದ ಲಾಂಛನ ವನ್ನು ಕೇಮಾರ್ ಸ್ವಾಮೀಜಿ ಬಿಡುಗಡೆ ಮಾಡಿದರು. ಮಧುಮೇಹ ಬರದಂತೆ ಯಾವ ರೀತಿಯಲ್ಲಿ ತಡೆಗಟ್ಟಬಹುದು ಎಂದು ಡಾ.ಸತೀಶ್ ಶಂಕರ್ ಬಿ ಮಾಹಿತಿ ನೀಡಿದರು. ಮಾಹಿತಿ ಕಾರ್ಯಾಗಾರವು ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಆಸ್ಪತ್ರೆ ಗಂಜಿಮಠದಲ್ಲಿ ಜರಗಿತು. .ಮುಖ್ಯ ಅತಿಥಿಯಾಗಿ ಪ್ರಸನ್ನ ಆಯುರ್ವೇದ ಕಾಲೇಜು ಬೆಳ್ತಂಗಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಶ್ರೀ ಕುಮಾರ್, ಡಾ.ನಾರಾಯಣ ಭಟ್, ಡಯಾಬೆಟಿಕ್ ಇನ್ನೋವೆಟ್ ರೀಸರ್ಚ್ ಫೌಂಡೇಷನ್ ಇದರ ಅಧ್ಯಕ್ಷ ಡಾ.ಸತೀಶ್ ಶಂಕರ್ ಬಿ ಉಪಸ್ಥಿತರಿದ್ದರು. ಡಾ.ಸೌಜನ್ಯ ಸ್ವಾಗತಿಸಿ ಹರೀಶ್ ಕೆ.ಆದೂರು ನಿರೂಪಿಸಿದರು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ…






