ಪೊಳಲಿ: ತೀರಾ ಹಿಂದುಳಿದಿದ್ದ ನಮ್ಮ ತೀಯಾ ಸಮಾಜವನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಅವಿರತವಾಗಿ ಶ್ರಮಿಸಿದ ಹಿರಿಯ ಚೇತನಗಳನ್ನು ಸ್ಮರಿಸಿ ಅವರ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಧರ್ಮ ಹಾಗೂ ಆದ್ಯ ಕರ್ತವ್ಯ ಎಂದು ಉಳ್ಳಾಳ ಶ್ರೀ ಚೀರುಂಭಾ ಭಗವತೀ ತೀಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ನುಡಿದರು.
ಅವರು ಉಳ್ಳಾಲ ಶ್ರೀ ಚೀರುಂಭಾ ಭಗವತೀ ತೀಯಾ ಸಮಾಜ ಸೇವಾ ಸಂಘದ ಮುಡಾೈಕೋಡಿ- ಬೆಂಜನಪದವು ಬಂಟ್ವಾಳ ದ.ಕ. ಇದರ 47ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಮಾರಂಭವನ್ನು ಶ್ರೀ ಉಳ್ಳಾಲ ಕ್ಷೇತ್ರದ ಮಂಜಪ್ಪ ಕಾರ್ನವರ್, ಅಪ್ಪು ಆತಾರ್ ಹಾಗೂ ಕುದ್ರೋಳಿ ಕ್ಷೇತ್ರದ ಬೀರಣ್ಣ ಆತಾರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ಆಧ್ಯಾತ್ಮಿಕದಲ್ಲಿ ವಿಶೇಷ ಸಾಧನೆ ಮಾಡಿದ ವಿಜಯ ಸುವರ್ಣ ಪೊಳಲಿ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಮೇಶ್ ಸಾಲ್ಯಾನ್ ಬೆಂಜನಪದವು, ಕಲಾ ಸಾಧನೆ ಮಾಡಿದ ಯಕ್ಷರಂಗದ ಪ್ರಸಿದ್ಧ ಕಲಾವಿದ ಬಿ.ಮೋಹನ್ ಕುಮಾರ್ ಅಮ್ಮುಂಜೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಕೊಗ್ಗಪ ಬೆಳ್ಚಾಡ ಮಾದುಕೋಡಿ ಇವರನ್ನು ಅಭಿನಂದಿಸಲಾಯಿತು. ಶ್ರೀ ಕುದ್ರೋಳಿ ಕ್ಷೇತ್ರದ ಮೋಕ್ತೇಸರ ಮಾಧವ ಜಪ್ಪ ಪಟ್ನ , ಪ್ರಧಾನ ಕಾರ್ಯದರ್ಶಿ ಸುಧೀರ್ ಉಪಸ್ಥಿತರಿದ್ದರು.

ಸಾವಿತ್ರಿ, ಲೀಲಾವತಿ, ಗಿರಿಜ ಪ್ರಾರ್ಥಿಸಿದರು. ಕು| ಸ್ವಾತಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಬಾಬು ಸಾಲ್ಯಾನ್ ವರದಿ ವಾಚಿಸಿದರು. ಸಲಹೆಗಾರರಾದ ಗೋಪಾಲ ಬೆಳ್ಚಡ ಬೆಂಜನಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಧನಂಜಯ ಬೆಂಜನಪದವು, ಕು|ಸ್ವಾತಿ, ಕು|ಅಶ್ವಿನಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಕಮಾಲಾಕ್ಷ ಆತಾರ್, ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲ ಆಡಳಿತ ಮೋಕ್ತೇಸರಾದ ಗಂಗಾಧರ್ ಉಳ್ಳಾಲ್, ಕಾರ್ಯದರ್ಶಿ ಬಾಬು ಬೆಳ್ಚಾಡ, ಮಂಗಳೂರು ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್, ಶ್ರೀ ಭಗವತೀ ಕ್ಷೇತ್ರ ಕುದ್ರೋಳಿ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಕೋಶಾಧಿಕಾರಿ ಯಶವಂತ್ ಉಚ್ಚಿಲ್, ಮೋಕ್ತೇಸರ ಸುಂದರ ಬೆಳ್ಚಾಡ ನಂದ್ಯ, ಶ್ರೀ ಭದ್ರಕಾಳಿ ದೇವಳದ ಧರ್ಮದರ್ಶಿ ರಮೇಶ್ ಬಿ., ಕಳ್ಳಿಗೆ ಗ್ರಾ.ಪಂ ಉಪಾಧ್ಯಕ್ಷ ಪುರುಷ ಎನ್.ಸಾಲ್ಯಾನ್, ಮಣೇಲು ಗ್ರಾಮ ಗುರಿಕಾರ ಚಿದಾನಂದ ಗುರಿಕಾರ ನಂದ್ಯ, ಉಳ್ಳಾಲ ಯುವ ವೇದಿಕೆ ನಾಗೇಶ್ ತೋಕ್ಕೊಟ್ಟು, ಮಹಿಳಾ ವೇದಿಕೆ ಸಂಚಾಲಕಿ ಸುಹಾಸಿನಿ ಜೆ.ಬಬ್ಬುಕಟ್ಟೆ ಸುಂದರ ಬೆಳ್ಚಾಡ ಮಾದುಕೋಡಿ ಉಪಸ್ಥಿತರಿದ್ದರು. ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ ಮಾದುಕೋಡಿ ಇವರ ಉಸ್ತುವಾರಿಯಲ್ಲಿ ಜರಗಿದ ಈ ಕಾರ್ಯಕ್ರಮದ ಕೊನೆಯಲ್ಲಿ ಸಾವಿತ್ರಿ ಧನ್ಯವಾದವಿತ್ತರು. ಬಿ.ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.



































