ಮೂಡುಬಿದಿರೆ: ಯುವಜನತೆ ಯಾವುದೇ ದುಷ್ಕೃತ್ಯಕ್ಕೆ ಬಲಿಯಾಗದೆ ಸ್ವಾಮೀ ವಿವೇಕಾನಂದರ ತತ್ವ, ಆದರ್ಶ, ನೀತಿಗಳನ್ನು ಮೈಗೂಡಿಸಿಕೊಂಡು ತಮ್ಮ ಬದುಕನ್ನು ಹಸನಾಗಿಸಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.

12-2

ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಮೂಡುಬಿದಿರೆಯ ಸಂಚಲನ್ ಮತ್ತು ಸ್ವಾಮಿ ವಿವೇಕಾನಂದ ಜನ್ಮ ದಿನೋತ್ಸವ ಸಮಿತಿಯ ವತಿಯಿಂದ ಸ್ವರಾಜ್ಯ ಮೈದಾನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ-2017 ಮತ್ತು ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟ ವಿವೇಕ ಟ್ರೋಫಿಯನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಜನತೆ ಹೆಮ್ಮೆಯಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸುತ್ತಿದ್ದಾರೆ. ಯುವಜನತೆ ವಿದ್ಯಾವಂತರು, ದೈರ್ಯವಂತರು ಆಗಬೇಕೆಂದು ಕರೆ ಕೊಟ್ಟಿರುವವಿವೇಕಾನಂದರ ಆದರ್ಶಗಳನ್ನು ಮೂಡುಬಿದಿರೆಯಲ್ಲಿ ಡಾ.ಎಂ.ಮೋಹನ್ ಆಳ್ವರವರು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕದ ಮೂಲಕ ಮುಂದೆ ಸಾಗಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇಶೀಯ ಹಾಗೂ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ದೈಹಿಕವಾಗಿ ನಮ್ಮನ್ನು ಬಲಗೊಳಿಸುತ್ತದೆ. ಈ ಕ್ರೀಡೆ ನಶಿಸಹೋಗದಂತೆ ಸಮಾಜವು ಕೈ ಜೋಡಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಉದ್ಯಮಿ ಶ್ರೀಪತಿ ಭಟ್, ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸಂಚಲನ್ ಸಮಿತಿಯ ಸಂಚಾಲಕರು ಸೂರಜ್ ಜೈನ್ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಸ್ವಾಗತಿಸಿದರು. ಮೈಟ್ ಕಾಲೇಜಿನ ಪ್ರಾಧ್ಯಪಕ ಮಂಜುನಾಥ ನಾಯಕ್ ಧನ್ಯವಾದವಿತ್ತರು. ಜೈನ್ ಕಾಲೇಜ್‍ನ ಅಧ್ಯಾಪಕ ವಿನಯಚಂದ್ರ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *