ಸಿದ್ಧಕಟ್ಟೆ : ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಮದಂಗೋಡಿಯ ಮುಗೇರುಗುಡ್ಡೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಶ್ರೀ ಮಹಾಕಾಳಿ, ಶ್ರೀ ಮುಗೇರ ದೈವಗಳು ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಜ.16 ರಿಂದ ಜ. 18ರ ವರೆಗೆ ನಡೆಯಲಿದೆ.
ಜ. 16 ರಂದು ಬೆಳಿಗ್ಗೆ ಪುಣ್ಯಾಹ ವಾಚನ, ಸ್ಥಳ ಶುದ್ಧೀಕಲಶ, ಬೆಳಿಗ್ಗೆ ಗಂಟೆ 9.00 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 1.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 6.00ಕ್ಕೆ ಭಂಡಾರ ಏರುವುದು. ರಾತ್ರಿ ಗಂಟೆ 9.30 ರಿಂದ ಶ್ರೀ ಧರ್ಮರಸುಳ್ಳಾಯ ದೈವದ ನೇಮ, ಶ್ರೀ ಮಹಾಕಾಳಿ ದೈವದ ನೇಮೋತ್ಸವ, ಗಗ್ಗರ ಸೇವೆ, ಮುಡಿಸೇವೆ ನಡೆಯಲಿದೆ. ಜ.17 ರಂದು ಬೆಳಿಗ್ಗೆ 7.00ರಿಂದ ಗುಳಿಗ ದೈವದ ನೇಮ.ರಾತ್ರಿ ಗಂಟೆ 8.00 ರಿಂದ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 10.00 ರಿಂದ ಶ್ರೀ ಮುಗೇರ ದೈವಗಳ ನೇಮೋತ್ಸವ, ದರ್ಶನ ಬಲಿ. ರಾತ್ರಿ ಗಂಟೆ 1.00 ರಿಂದ ತನ್ನಿಮಾನಿಗ ದೈವದ ನೇಮೋತ್ಸವ ನಡೆಯಲಿದೆ. ಜ.18ರಂದು ಬೆಳಿಗ್ಗೆ ಗಂಟೆ 6.00 ರಿಂದ ಶ್ರೀ ಅಲೇರ ಪಂಜುರ್ಲಿ ದೈವದ ನೇಮ ನಂತರ ಕೊರಗ ತನಿಯ ದೈವದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಭಾ ಕಾರ್ಯಕ್ರಮ :
ಜ. 17 ರಂದು ರಾತ್ರಿ ಗಂಟೆ 8.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಪೂಜಾರಿ , ಸಂಗಬೆಟ್ಟು ಗ್ರಾ.ಪಂ. ಸದಸ್ಯ ದೇವಪ್ಪ ಕರ್ಕೇರಾ ಕರ್ಪೆ, ಆಡಳಿತ ಸಮಿತಿಯ ಅಧ್ಯಕ್ಷ ಬಿ. ಭುಜಬಲಿ ಕಂಬಳಿ , ಆಡಳಿತ ಸಮಿತಿಯ ಗೌರವಾಧ್ಯಕ್ಷ ರತ್ನಕುಮಾರ್ ಚೌಟ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

