ಮೂಡುಬಿದಿರೆ: ಶಿಲ್ಪಕಲೆ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿಫುಲ ಅವಕಾಶವಿದೆ. ಶಿಲ್ಪಕಲೆಯನ್ನು ಕಲಿಯುವ ಆಸಕ್ತರ ಸಂಖ್ಯೆಯು ಗಣನೀಯ ಏರಿಕೆಯಾಗುತ್ತಿದೆ ಶಿಲ್ಪ ಕಲಾ ಅಕಾಡೆಮಿ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು ಶಿಲ್ಪ ಕಲೆಯ ಸಕಾರತ್ಮಕ ಬೆಳವಣಿಗೆಗೆ ಕಾರಣವಾಗಿದೆ. ಆಳ್ವಾಸ್ ಶಿಲ್ಪ ವಿರಾಸತ್‍ನಂತಹ ಶಿಬಿರಗಳು ಕಲೆಯ ಉನ್ನತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಇಂತಹ ಪ್ರಯತ್ನಗಳು ರಾಜ್ಯದೆಲ್ಲೆಡೆ ನಡೆಯಬೇಕು ಎಂದು ಹಿರಿಯ ಶಿಲ್ಪ ಕಲಾವಿದ ರಾಮಮೂರ್ತಿ ಎಂ. ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ಸಭಾಭವನದಲ್ಲಿ 10 ದಿನ ನಡೆಯುವ ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

shilpa

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ನಾತಕೋತ್ತರ ವಿಶ್ಯುಯಲ್ ಆಟ್ರ್ಸ್ ಅನ್ನು ಸಂಸ್ಥೆಯಲ್ಲಿ ಪ್ರಾರಂಭಿಸುತ್ತಿದ್ದೇವೆ. ಹಿರಿಯ ಕಲಾವಿದರ ಕಲಾಕೃತಿಗಳಿಂದ ಸ್ಪೂರ್ತಿಗೊಂಡ ಕಲಾ ವಿದ್ಯಾರ್ಥಿಗಳು ಉತ್ತಮ ಕಲಾಕೃತಿಗಳನ್ನು ರಚಿಸುವಂತಾಗಬೇಕು. ಆಳ್ವಾಸ್ ಸಂಸ್ಥೆಯ ಕಲಾ ವಿದ್ಯಾರ್ಥಿಗಳ ಕಲಾಕೃತಿ ಪ್ರದರ್ಶವನ್ನು ಆಯೋಜಿಸಿದಲ್ಲಿ ಅದಕ್ಕೆ ಪೂರಕವಾದ ವ್ಯವಸ್ಥೆ ಸಂಸ್ಥೆ ಮಾಡಿಕೊಡಲಿದೆ ಎಂದು ಹೇಳಿದರು. ಶಿಬಿರ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.

ಶಿಬಿರದ ಶಿಲ್ಪಕಲಾವಿದರಾದ ಶಿವಕುಮಾರ್ ಜಿ.ವಿ(ಬೆಂಗಳೂರು), ಮಂಜುನಾಥ ಆಚಾರ್ಯ(ಚಿತ್ರದುರ್ಗ), ಸಿದ್ದರೂಡ(ಬಳ್ಳಾರಿ), ಶಿಲ್ಪಿ ಚಿದಾನಂದ(ವಿಟ್ಲ, ದ.ಕ), ಶಶಿಕುಮಾರ್ ಉಜಿರೆ(ದ.ಕ), ಕೃಷ್ಣ ಗುಡಿಗಾರ್(ಕುಂದಾಪುರ), ಕುಮಾರ್(ಕುಂದಾಪುರ), ಯತೀಶ್(ಕುಂದಾಪುರ), ಛತೀಸ್‍ಗಡ ಕಲಾವಿದರಾದ ಬಂಶಿಲಾಲ್ ಬೈದ್, ರವಿಂದ್ ನಾಗ್, ಅಮೀರ್ ನಾಗ್, ಆಕಾಶ್ ನಾಗ್ ಅವರನ್ನು ಸ್ವಾಗತಿಸಲಾಯಿತು.

By Suddi9

Leave a Reply

Your email address will not be published. Required fields are marked *