ಮೂಡುಬಿದಿರೆ: ಪಾಲಡ್ಕ ಸೈಂಟ್ ಇಗ್ನೇಶಿಯಸ್ ಲೋಯಲಾ ಚರ್ಚ್‍ನಲ್ಲಿ ಕ್ರಿಸ್ಮಸ್ ಅಂಗವಾಗಿ ಬಲಿಪೂಜೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಚರ್ಚ್‍ನ ಧರ್ಮಗುರು ಐವನ್ ಮೈಕಲ್ ರೊಡ್ರಿಗಸ್,ಬ್ರದರ್ ರೋಶನ್ ಡಿ’ಸೋಜಾ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಡೆನಿಸ್ ಡಿ’ಮೆಲ್ಲೊ ಉಪಸ್ಥಿತರಿದ್ದರು. ಪಾಲಡ್ಕ ಕ್ರೈಸ್ತ ಧರ್ಮಪ್ರಾಂತ್ಯದ 300 ಕುಟುಂಬಗಳ ಸಾವಿರಕ್ಕೂ ಅಧಿಕ ಕ್ರೈಸ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಅರುಣ್ ಡಯಾಸ್ ಹಾಗೂ ಲಿಗೋರಿ ಡಯಾಸ್ ಅವರು ಚರ್ಚ್‍ನಲ್ಲಿ ಬೃಹತ್ ಗೋದಲಿಯನ್ನು ನಿರ್ಮಿಸಿದರು.


