ಬಂಟ್ವಾಳ: ತುಂಬೆ ಡ್ಯಾಂ ಪ್ರದೇಶ ಖುದ್ದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಲಿಖಿತ ಮನವಿಯನ್ನು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಲ್ಲಿಸಿದೆ.

dam-2

ಬುಧವಾರ ಸಂತ್ರಸ್ತ ರೈತರು ಮನಪಾ ಕಮಿಷನರ್‍ನ್ನು ಭೇಟಿಯಾಗಿ ಮುಳುಗಡೆ ಪ್ರದೇಶ ಖುದ್ದಾಗಿ ಪರಿಶೀಲಿಸಿ ನ್ಯಾಯೋಚಿತವಾಗಿ ಪರಿಹಾರ ವಿತರಿಸಬೇಕೆಂದು ಮನವಿ ಮಾಡಿದಾಗ ಗುರುವರೇ ಪಟ್ಟಿಯಲ್ಲಿ ಇಲ್ಲದ ರೈತರ ಜಮೀನಿಗೆ ನಗರಪಾಲಿಕೆ ಅಧಿಕಾರಿಗಳು ತಹಶೀಲ್ದಾರ್ ಮೂಲಕ ಕಂದಾಯ ಇಲಾಖಾಧಿಕಾರಿಗಳು ಜಂಟಿಯಾಗಿ ಪರಿಶೀಲಿಸುವುದಾಗಿ ತಿಳಿಸಿದ್ದರೂ ಶನಿವಾರದವರೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಲಿಲ್ಲ. 5 ಮೀ. ಎತ್ತರಕ್ಕೆ ನೀರು ಸಲ್ಲಿಸಿ ಅಧಿಕಾರಿಗಳು ನೀರಿನ ಮಟ್ಟ ಗುರುತಿಸಿದ್ದು ಘೋಷಿಸಿದ ಪಟ್ಟಿಯಂತೆ ಸರಿಯಾಗಿದೆ ಎಂಬುದಾಗಿ ಪತ್ರಿಕೆಯಲ್ಲಿ (ಉದಯವಾಣಿ) ವರದಿಯಾಗಿದ್ದು ಪಟ್ಟಿಯಲ್ಲಿದ್ದವರ,ಇಲ್ಲದವರ ಜಮೀನಿಗೆ ಒಳಚರಂಡಿ ಇಲಾಖಾ ಅಥವಾ ಕಂದಾಯ-ಮನಪಾ ಅಧಿಕಾರಿಗಳು ಈ ತನಕ ಭೇಟಿ ನೀಡದೆ ಇದ್ದುದರಿಂದ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಮುಳುಗಡೆ ಪ್ರದೇಶ ಪರಶೀಲಿಸಿ ಏಕಗಂಟಿನಲ್ಲಿ ಸೂಕ್ತ ತಾರತಮ್ಯವಿಲ್ಲದ ರೀತಿಯಾಗಿ ಪರಿಹಾರ ನೀಡುವಂತೆ ವಿನಂತಿಸಲಾಗಿದೆ.

ಬಿ.ಮೂಡದ ತಿಮ್ಮಪ್ಪ ರೈ ಜಮೀನು ಅಲ್ಲದೆ ಸಜೀಪ ಮುನ್ನೂರು ಗ್ರಾಮದ ಅದ್ರುಕ್ಕು ಶಿವರಾಮ ಬಾಶ್ರೀತ್ತಾಯ 1.30 ಎಕರೆ ಜಂಟಿ ಖಾತೆ ಜಮೀನು ಕೂಡಾ ಮುಳುಗಡೆಯಾಗಿದ್ದು ಇಂತಹ 0.05-0.10 ಎಕರೆ ಮುಳುಗಡೆ ಉದಾಹರಣೆ ಇನ್ನಷ್ಟು ಇರುವುದರಿಂದ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕೇಂದ್ರ ಜಲ ಆಯೋಗ ನಿರ್ದೇಶನದಂತೆ 1 ಮೀ.ಎತ್ತರ ವರತೆ ಪ್ರದೇಶ ಸರ್ವೆ ಮಾಡಿ ಪರಿಹಾರ ನೀಡುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಇಂಡಿಯನ್ ಸಿವಿಲ್ ಆ್ಯಕ್ಟ್ ಪ್ರಕಾರ ಭೂ ಪರಿಹಾರ ಯಾವ ಮೂಲದಿಂದ ಮನಪಾ ನೀಡುವುದು!. ಗಂಗಾಪೂಜೆಯಂದು ಮೇಯರ್ ರೈತರಿಗೆ ಚೆಕ್ ಈಗಾಗಲೇ ಸಿದ್ಧವಾಗಿದೆ ಎಂದೂ,ಉಸ್ತುವಾರಿ ಸಚಿವರು ಮೂರು ದಿನದಲ್ಲಿ ಪರಿಹಾರ ನೀಡಲಿದ್ದೇವೆ ಎಂದು ಹೇಳಿದರೂ ಇಂದಿನ ತನಕ ಯಾವುದೇ ಸಂತ್ರಸ್ತ ರೈತನಿಗೆ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಪ್ರಜಾಸತ್ತಾತ್ಮಕ ರೀತಿಯ ಹೇಳಿಕೆಗೆ ಸರಕಾರ ಒತ್ತು ನೀಡದೆ ರೈತರನ್ನು ಬೀದಿಗಿಳಿದು ಹೋರಾಡುವಂತೆ ಪ್ರೇರೇಪಿಸಿದಂತಾಗಿದೆ.

By Suddi9

Leave a Reply

Your email address will not be published. Required fields are marked *